Oplus_131074 
ಜಿಲ್ಲೆ

ಯುವ ಬರಹಗಾರರಲ್ಲಿರಲಿ ಆಲೋಚನೆ ಸ್ವಭಾವ

ಕಲಬುರಗಿ: ವರ್ತಮಾನದ ಸಮಾಜದಲ್ಲಿ ನೊಂದು-ಬೆAದವರ ನೈಜ ಜೀವನದ ಸಂಗತಿ ಮತ್ತು ಬವಣೆಗಳನ್ನು ಬರೆಯುವ ಧೈರ್ಯ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಗತ್ಯ. ತರಗತಿಯಲ್ಲಿನ ಕಲಿಕೆಗಿಂತ ಸಮಾಜದಲ್ಲಿ ಗೋಚರಿಸುವ ಹಸಿವು ಮತ್ತು ಬದುಕಿನ ಅನಾವರಣವೇ ನಿಜವಾದ ಸಾಹಿತ್ಯ. ಯುವ ಬರಹಗಾರರಲ್ಲಿ ಆಲೋಚನೆ ಮತ್ತು ಚಿಂತನೆ ಸ್ವಭಾವವಿದ್ದರೆ ಭರವಸೆಯ ಲೇಖಕರಾಗಬಹುದು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪಾ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹರಿಹರ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಓದುವ ಹವ್ಯಾಸ ಜತೆಗೆ ಹಸಿವಿನ ಸಂಗತಿ ಮತ್ತು ಆಸಕ್ತಿದಾಯಕ ವಿಷಯಗಳ ಕುರಿತು ಬರೆಯುವ ಪ್ರವೃತ್ತಿ ಬೆಳೆಸಿಕೊಂಡರೆ ಮನಸ್ಸಿನೊಂದಿಗೆ ಸಮಾಜದ ಆರೋಗ್ಯ ಕಾಪಾಡಬಹುದು ಎಂದರು.
ಕವಿತೆ ಮಾಯಾ ಜಿಂಕೆ ಇದ್ದಂತೆ. ಕವಿತೆಗೆ ಅದರದೇ ಆದ ಉz್ದೆÃಶ ಮತ್ತು ಆದರ್ಶಗಳಿವೆ. ಕವಿತೆಗಳಲ್ಲಿ ಜೀವನಸಾರ, ಜೀವನ ಸತ್ವ ಮತ್ತು ಜೀವನ ಸಾಂಗತ್ಯಗಳ ಸಮಗ್ರ ಹೂರಣವಿರುತ್ತದೆ. ಅದನ್ನು ಓದುವ ಆಸಕ್ತಿ, ಸಾರದ ಗ್ರಹಿಕೆಯಿಂದ ರಂಜಿಸಿ ವಿಮರ್ಶಿಸುವ ಮನಸ್ಸಯ ಬೆಳೆಸುತ್ತದೆ. ಪ್ರಸ್ತುತ ಕವಿ ಮುಖ್ಯವೋ ಅಥವಾ ಕೃತಿ ಮುಖ್ಯವೋ ಎಂಬ ಜಿಜ್ಞಾಸೆಯಿದೆ. ಸಮಾಜಕ್ಕೆ ಆದರ್ಶವಿರುವ ಕವಿ ಮತ್ತು ಕೃತಿ ಎರಡೂ ಮುಖ್ಯವಾಗಬೇಕು ಎಂದು ಆಶಿಸಿದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ದೇಶ ಮತ್ತು ವ್ಯವಸ್ಥೆ ಅರ್ಥವಾಗಲು ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಣ್ಣಾಗಿ ನೋಡಬೇಕು. ಅವರ ದೃಷ್ಟಿಕೋನ ತಿಳಿದರೆ ಮಾತ್ರ ವ್ಯವಸ್ಥೆಯೊಳಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಅತಿಥಿ ಪ್ರಾಧ್ಯಾಪಕ ಡಾ.ಸಂತೋಷ ಕಂಬಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.