ಹನೂರು: ದೇಶಪ್ರೇಮಿ ಸಾವರ್ಕರ್ ಅವರ ಇತಿಹಾಸವನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ ರಥಯಾತ್ರೆ ಕೈಗೊಂಡಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದು ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಸಂಯೋಜಕ ಜನಧ್ವನಿ ಬಿ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಕೌದಳ್ಳಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಆಗಮಿಸಿದ ಸಾವರ್ಕರ್ ರಥಯಾತ್ರೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಬಾಲ್ಯದಿಂದಲೇ ದೇಶಭಕ್ತರಾಗಿದ್ದ ಸಾವರ್ಕರ್, ಸ್ವಾತಂತ್ರೃಕ್ಕಾಗಿ ತಮ್ಮದೆ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇಂದಿನ ಯುವ ಪೀಳಿಗೆಗೆ ಇವರ ಇತಿಹಾಸವನ್ನು ತಿಳಿದುಕೊಳ್ಳಬೇಕಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನಾ ಸಾವರ್ಕರ್ ರಥಯಾತ್ರೆಯು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಕಾರ್ಯಕತರು ಜಯಘೋಷ ಮೊಳಗಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್, ಹನೂರು ಮಂಡಲದ ಕೃಷ್ಣಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ರಾಜೇಶ್, ಮ.ಬೆಟ್ಟ ಮಹಿಳಾ ಮೋರ್ಚಾಧ್ಯಕ್ಷೆ ಮೀನಾ, ಯುವ ಮೋರ್ಚಾ ಅಧ್ಯಕ್ಷ ಚಂದ್ರು, ಗ್ರಾಪಂ ಸದಸ್ಯರಾದ ವರಪ್ರಸಾದ್, ರಾಜಪ್ಪ, ಮುಖಂಡರಾದ ಮರಿಸ್ವಾಮಿ, ಉಮೇಶ್, ಸುರೇಶ್, ನಾಗರಾಜು, ಮಹೇಶ್ ಇತರರಿದ್ದರು.