ಹುಬ್ಬಳ್ಳಿ: ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಧಾರವಾಡ ಜಿಲ್ಲೆ 50 ಜನ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಿಖಿಲ್ ಶಂಕರ್ ನೋಟಿಸ್ ನೀಡಿದ್ದು, ಪಕ್ಷ ಸಂಘಟನೆಯ ಅನೇಕ ಸಭೆಗೆ ಯಾಕೆ ಹಾಜರಾಗಿಲ್ಲ ಎಂದು ಕೇಳಿದ್ದು, 7 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ.
ಶಾಸಕ ಶ್ರೀನಿವಾಸ ಮಾನೆ ಪುತ್ರ ಸೂರಜ್ ಮಾನೆ, ಅರ್ಬಾಜ್ ಮನಿಯಾರ, ಸೂರಜ್ ಗೌಡ, ದಾದಾಪೀರ ಹಂಚಿನಮನಿ ಸೇರಿ 50 ಜನರಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿದೆ.