ಜಿಲ್ಲೆ

ಯುಪಿಎಸ್ಸಿ ಪರೀಕ್ಷೆಗಳು ಹಾವು-ಏಣಿ ಆಟ

Yadgiri - Laxmikanth Kulkarni

ಯಾದಗಿರಿ: ವಿದ್ಯಾಥರ್ಿ ಜೀವನ ಮುಳ್ಳಿನ ಹಾಸಿಗೆ ಇದ್ದಂತೆ. ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಜೀವನದಲ್ಲಿ ನೀವು ಇಟ್ಟುಕೊಂಡ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ಸಲಹೆ ನೀಡಿದರು.

ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳೊಡನೆ ಹೆಜ್ಜೆಗೊಂದು ದಾರಿ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸ್ಪಧರ್ಾತ್ಮ ಪರೀಕ್ಷೆಗಳಿಗೂ ನಾವು ಕ್ರಮಬದ್ಧವಾಗಿ ಅಧ್ಯಯನ ನಡೆಸಬೇಕು. ಅದರಲ್ಲೂ ಯುಪಿಎಸ್ಸಿ ಪರೀಕ್ಷೆಗಳು ಹಾವು-ಏಣಿ ಆಟವಿದ್ದಂತೆ. ಮೂರು ಹಂತದಲ್ಲಿ ಪರೀಕ್ಷೆ ನಡೆಯುತ್ತವೆ. ಮೊದಲ ಹಂತದಲ್ಲಿ ತೇರ್ಗಡೆಯಾಗದಿದ್ದರೆ, ಮತ್ತೆ ಮೂರು ಹಂತ ಬರೆಯಬೇಕಾಗುತ್ತದೆ ಎಂದರು.

ನಿಮ್ಮ ಗುರಿ ದೊಡ್ಡದಾಗಿರಬೇಕು. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ ಬೇಕು. ಮೊದಮೊದಲು ಬಾರಿ ವಿಫಲವಾದರೂ, ಎಂದಿಗೂ ಛಲ ಬಿಡದೇ ಶ್ರಮಿಸಿದರೆ ಗುರಿ ಸಾಸಲು ಸಾಧ್ಯ ಎಂದರು.

ಸಕರ್ಾರಿ ಕರ್ತವ್ಯದ ಬಗ್ಗೆ ಡಿಸಿ ಅವರಿಂದ ಸೂಕ್ತ ಮಾಹಿತಿ ಪಡೆದ ವಿದ್ಯಾಥರ್ಿಗಳು, ತಮ್ಮ ಪರಿಚಯ ಮಾಡಿಕೊಂಡರು. ವಿದ್ಯಾಥರ್ಿಗಳು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಕಾರಿ ಉತ್ತರ ನೀಡಿ ಜಿಲ್ಲಾಡಳಿತದ ಕಾರ್ಯ ವೈಖರಿ ಹೇಗಿದೆ, ಜನರು ಯಾವ ಯಾವ ಕೆಲಸಕ್ಕಾಗಿ ಜಿಲ್ಲಾಡಳಿತ ಭವನಕ್ಕೆ ಬರುತ್ತಾರೆ, ಇಲ್ಲಿನ ಜಿಲ್ಲಾ ಮಟ್ಟದ ಅಕಾರಿಗಳು ಕಾರ್ಯಗಳನ್ನು ನೋಡುವ ಮತ್ತು ಮಕ್ಕಳು ಪ್ರೇರೇಪಿಸುವ ಕಾರ್ಯ ಜಿಲ್ಲಾಡಳಿತದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವಣ್ಣಪ್ಪ ಸಿನ್ನೂರ್, ಮರೆಪ್ಪ, ಮುನೀರ್ ಅಹ್ಮದ್ ಹಾಗೂ ವಿದ್ಯಾಥರ್ಿ, ವಿದ್ಯಾಥರ್ಿನಿಯರು ಇದ್ದರು.