ಜಿಲ್ಲೆ

ಯುನಿಟಿ ಆಸ್ಪತ್ರೆ ವಾರ್ಷಿಕೋತ್ಸವ

ಧಾರವಾಡ: ನಗರದ ಯುನಿಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಮಂಗಳವಾರ ಆಸ್ಪತ್ರೆ ಆವರಣದಲ್ಲಿ ಜರುಗಿತು.
ಆಸ್ಪತ್ರೆ ಅಧ್ಯಕ್ಷ ಡಾ. ಜ್ಯೋತಿಪ್ರಕಾಶ ಸುಲ್ತಾನಪುರಿ ಮಾತನಾಡಿ, ಸುತ್ತಲಿನ ಜನರಿಗೆ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಸತತ ಪ್ರಯತ್ನದಿಂದ ಆಸ್ಪತ್ರೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು. ಈ ಕಾರ್ಯಕ್ಕೆ ಎಲ್ಲ ಸಿಬ್ಬಂದಿ ಸಹಕಾರ ಅಗತ್ಯವಾಗಿದೆ ಎಂದರು.
ನಿರ್ದೇಶಕ ಡಾ. ಶ್ರೀಕಂಠ ರಾಮನಗೌಡರ ಮಾತನಾಡಿ, ಆಸ್ಪತ್ರೆಯು ಜನತೆಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸತತವಾಗಿ ಶ್ರಮಿಸುತ್ತಿದೆ ಎಂದರು.
ನಿರ್ದೇಶಕರಾದ ಡಾ. ಅಮಿತ ಗಲಗಲಿ, ಡಾ. ಅಂಬೇಶ ಪ್ರಸಾದ, ಡಾ. ಸಂತೋಷ ಚಕ್ರಸಾಲಿ, ಡಾ. ನೀಲಕಂಠ ಪಾಟೀಲ, ಡಾ. ಸುನೀಲ ಮಳಗಿ, ಡಾ. ಪ್ರಕಾಶ ರಾಮನಗೌಡರ, ಡಾ. ಸಂತೋಷ ಚಿಕರೆಡ್ಡಿ, ಡಾ. ನವೀನ ಮಂಕಣಿ, ಡಾ. ಪರಮೇಶ್ವರ ಕೆಂಚನ್ನವರ, ಡಾ. ಅನಿಕೇತ ಪಾಂಡುರಂಗಿ, ಡಾ. ಸಂತೋಷ ಮಾಳಗಿ, ವಿಜೇಂದ್ರ ಕುಲಕರ್ಣಿ, ಸಂತೋಷ ಬಡಿಗೇರ, ಮಂಜುನಾಥ ಪಟ್ಟಿಹಾಳ, ಸಂಗಮೇಶ ವಾರಿ, ರಾಜೇಂದ್ರ, ರಶ್ಮಿ ಡೇವಿಡ್, ಸಂಜೀವ ಮಾಳಗಿ, ಸಿಬ್ಬಂದಿ, ಇತರರು ಇದ್ದರು.