ಹುಣಸೂರು: ನಗರ ವ್ಯಾಪ್ತಿಯಲ್ಲಿ ಸಂಪೂರ್ಣ ಒಳಚರಂಡಿ (ಯುಜಿಡಿ)ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ 78 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ನಗರದ ಶಬ್ಬೀರ್‌ನಗರ ಬಡಾವಣೆಯ ಶಾಹಿ ಮಸೀದಿಯ ವಾಣಿಜ್ಯ ಮಳಿಗೆಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಕಳೆದ 20 ವರ್ಷಗಳಿಂದ ನಗರದ ಪ್ರಮುಖ ಬಡಾವಣೆಗಳಲ್ಲಿ ಇಂದಿಗೂ ಒಳಚರಂಡಿ ವ್ಯವಸ್ಥೆ ಪರಿಪೂರ್ಣವಾಗಿಲ್ಲ. ನಗರದಾದ್ಯಂತ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ 78 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯೋಜನೆ ಶೀಘ್ರ ಅನುಮೋದನೆಗೊಳ್ಳುವ ವಿಶ್ವಾಸವಿದೆ ಎಂದರು.
ನಗರದ ಹಲವು ಮಸೀದಿಗಳ ಅಭಿವೃದ್ಧಿಗಾಗಿ ಶಾಸಕರ ನಿಧಿಯಡಿ ಅನುದಾನ ನೀಡಿದ್ದೇನೆ. ಶಾಹಿ ಮಸೀದಿ ಅಭಿವೃದ್ಧಿಗೆ 5 ಲಕ್ಷ ರೂ ನೀಡುತ್ತೇನೆ. ಮುಸ್ಲಿಂ ಬ್ಲಾಕ್‌ನ ಸರ್ಕಾರಿ ಉರ್ದುಶಾಲೆಗೆ ವಿಶೇಷ ಅನುದಾನದಡಿ 6ಲಕ್ಷ ರೂ.ಗಳ ಅನುದಾನ ನೀಡುತ್ತೇನೆ ಎಂದು ತಿಳಿಸಿದರು.
ಶಾಹಿ ಮಸೀದಿಯ ಅಧ್ಯಕ್ಷ ಎಚ್.ಎಂ.ಫಜಲುಲ್ಲಾ ಮಾತನಾಡಿ, ಶಾಸಕರು ಕೋಟ್ಯಂತರ ರೂ. ಅನುದಾನವನ್ನು ತಂದು ತಾಲೂಕಿನ ಅಭಿವೃದ್ಧಿಯನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿರುವುದು ಜನರಿಗೆ ಸಂತಸ ಉಂಟುಮಾಡಿದೆ ಎಂದು ಶ್ಲಾಘಿಸಿದರು.
ಶಾಹಿ ಕಾರ್ಯದರ್ಶಿ ಎಂ.ಎಂ. ವಜೀಅಹ್ಮದ್, ನಗರಸಭಾ ಸದಸ್ಯೆ ಸಮೀನಾ ಬಾನು, ಸಯ್ಯದ್ ಯೂನೂಸ್, ಮಾಲಿಕ್ ಪಾಷ,
ಜೆಡಿಎಸ್ ಮುಖಂಡರಾದ ನಸ್ರುಲ್ಲಾ ಮುಬಾರಕ್, ಸಮಿಉಲ್ಲಾ, ಮಹಾತಾಬ್, ರಫಿ, ಜೋಗಿ ಶಾಜಮ, ಖಾಲಿದ್ ಪಾಷಾ, ಆಯುಬ್ ಖಾನ್, ಸಿರಾಜ್ ಪಾಷ ಹಾಜರಿದ್ದರು. ಮಸೀದಿ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.