ಪಾ.ಶ್ರೀ.ಅನಂತರಾಮ್ ಕೋಲಾರ
ಕರೊನಾ ಮಹಾಮಾರಿಯಿಂದ ಮಡದಿ ಮಕ್ಕಳು, ಹಿರಿಯರೊಂದಿಗೆ ಮನೆಯಿಂದ ಆಚೆ ಬರಲು ಹೆದರುತ್ತಿದ್ದ ಜಿಲ್ಲೆಯ ಜನತೆ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಯುಗಾದಿ ಸಾಂಸತಿಕ ರಸದೌತಣದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮೊದಲ ಬಾರಿಗೆ ಜಿಲ್ಲಾಡಳಿತ ಆಯೋಜಿಸಿದ್ದ ಯುಗಾದಿ ಸಂಭ್ರಮವನ್ನು ಜಾತ್ಯಾತಿತವಾಗಿ, ಪಾತೀತವಾಗಿ ನಡೆಸಿರುವ ಜಿಲ್ಲಾಡಳಿತಕ್ಕೆ, ವಿಶೇಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಹಗಲಿರಳು ಶ್ರಮಿಸಿರುವ ಎಸ್ಪಿ ಡಿ.ದೇವರಾಜ್ ಹಾಗೂ ಸರ್ಕಾರಕ್ಕೆ ಜನತೆ ಕೃತತೆ ಸಲ್ಲಿಸಿ, ಪ್ರತಿ ವರ್ಷ ಜನಸ್ನೇಹಿ ಯುಗಾದಿ ಆಯೋಜಿಸಲು ಮನವಿ ಮಾಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸುಮಾರು 20 ಸಾವಿರಕ್ಕೂ ಅಧಿಕ ಕಲಾಸಕ್ತರು ಸೇರಿದ್ದರು. ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಸಂಗೀತ ಸವಿದ ಜನರು ಆಗಸಕ್ಕೆ ಚಿಮ್ಮಿದ ಬಣ್ಣ ಬಣ್ಣದ ಬಾಣ ಬಿರುಸುಗಳ ಚಿತ್ತಾರ ವೀಸಿ ಮನೆಗಳಿಗೆ ತೆರಳಿದರು.
ಜಿಲ್ಲೆಯ ಪ್ರಸಿದ್ಧ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜನ್ನಟ್ಟ ಕೃಷ್ಣಮೂರ್ತಿ ತಂಡ ನಡೆಸಿಕೊಟ್ಟ ದೇಸಿ ಸೊಗಡಿನ ಹಾಡುಗಳನ್ನು ಕೇಳಿ ಖುಷಿಪಟ್ಟ ಜನರು ನಟ ಗಣೇಶ್ ಅವರ ಡೈಲಾಗ್ಸ್ಗೆ ಫಿದಾ ಆದರೆ, ನಿರೂಪಕಿ ಅನುಶ್ರೀ ಮಾತುಗಳಿಗೆ ಚಪ್ಪಾಳೆಯ ಹೂಮಳೆಗೆರೆದರು.
ಗಾಯಕ ವಿಜಯಪ್ರಕಾಶ್, ಗಾಯಕಿ ಡಾ.ಶಮಿತಾ ಮಲ್ನಾಡ್, ಅಶ್ವಿನ್ ಶರ್ಮ, ಕೀರ್ತನಾ, ರೆಮೋ, ನಿಖಿಲ್ ಪಾರ್ಥಸಾರಥಿ, ಶಾಶ್ವತಿ, ಪುಷ್ಪ ಆರಾಧ್ಯ ಮುಂತಾದವರೊಂದಿಗೆ ಭಕ್ತಿ ಗೀತೆ, ಸಿನಿಮಾ ಹಾಡುಗಳನ್ನು ಹಾಡಿ ಮನರಂಜಿಸಿದರು.
ಕೇರಳದ ಪ್ರಸಿದ್ಧ ಚಂಡೆವಾದನ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು. ಕಲಾವಿದರು ಡಾ.ರಾಜ್ಕುಮಾರ್ ಹಾಡಿರುವ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡನ್ನು ಚೆಂಡೆ ವಾಹನಗಳ ಮೂಲಕ ನುಡಿಸಿದಾಗ ಜನರು ಕುಣಿದು ಕುಪ್ಪಳಿಸಿದರು. ತೆಲುಗು ಹಾಡಿಗೂ ಜನ ಶಿಳ್ಳೆ, ಚಪ್ಪಾಳೆ ಮೂಲಕ ಸಂಭ್ರಮಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಎಸ್.ಮುನಿಸ್ವಾಮಿ, ಭಾರತದ ಸಂಸತಿಯ ಪ್ರತಿಕವಾದ ಯುಗಾದಿಯನ್ನು ಮುಂದಿನ ದಿನಗಳಲ್ಲಿ ಪಾತೀತವಾಗಿ, ಜಾತ್ಯಾತಿತವಾಗಿ ಆಚರಿಸಲು ಜನತೆ ಸಹಕಾರ ನೀಡಬೇಕು. ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಲು ಜಿಲ್ಲಾಡಳಿತ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಕಾರ್ಯಕ್ರಮ ಇಲ್ಲಿಗೆ ನಿಲ್ಲಬಾರದು, ಪ್ರತಿವರ್ಷ ಯುಗಾದಿ ಹಬ್ಬವನ್ನು ಜಿಲ್ಲಾಡಳಿತದಿಂದ ಅದ್ದೂರಿಯಾಗಿ ನಡೆಸೋಣ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಾರ್ಯಕ್ರಮದಿಂದಾಗಿ ಜಿಲ್ಲೆಯ ಬಗ್ಗೆ ಅಭಿಮಾನ, ಪ್ರೀತಿ, ಗೌರವ ಹೆಚ್ಚಾಗಿದೆ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್ಸಿ ಇಂಚರ ಗೋವಿಂದರಾಜು, ಜಿಪಂ ಸಿಇಒ ಯುಕೇಶ್ ಕುಮಾರ್, ನಗರಸಭೆ ಅಧ್ಯೆ ಶ್ವೇತಾಶಬರೀಷ್, ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಪತ್ರಕರ್ತರ ಸಂದ ಅಧ್ಯಕ್ಷ ವಿ.ಮುನಿರಾಜು, ಜಿಪಂ ಮಾಜಿ ಅಧ್ಯೆ ಮಂಗಮ್ಮ ಮುನಿಸ್ವಾಮಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು ಇತರರು ಉಪಸ್ಥಿತರಿದ್ದರು.
ಪುನೀತ್ಗೆ ಗೌರವ: ದಿ.ಡಾ.ಪುನೀತ್ ರಾಜಕುಮಾರ್ ಅವರಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟ ಬೊಂಬೆ ಹಾಡುತೈತೆ ಹಾಡನ್ನು ವಿಜಯಪ್ರಕಾಶ್ ಜನರೊಟ್ಟಿಗೆ ಹಾಡಿದ್ದು ವಿಶೇಷವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಎಂಎಲ್ಸಿ ಇಂಚರಗೋವಿಂದರಾಜು ಸಹ ಧ್ವನಿಗೂಡಿಸಿ ಪುನೀತ್ಗೆ ಗೌರವ ಸಮರ್ಪಣೆ ಮಾಡಿದರು.
ಬೇವು-ಬೆಲ್ಲ ವಿತರಣೆ: ಜನರಿಗೆ ಬೇವು&ಬೆಲ್ಲ ನೀಡಿ ಯುಗಾದಿ ಶುಭಾಶಯ ತಿಳಿಸಲಾಯಿತು. ದೂರದ ಊರುಗಳಿಂದ ಬಂದವರಿಗೆ ಊರು ಸೇರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಅಹಿತಕರ ಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಜಿಲ್ಲೆಯ ಜನತೆ ಕರೊನಾದಿಂದ 2 ವರ್ಷ ಮನರಂಜನೆ ಇಲ್ಲದೆ ಬೇಸತ್ತಿದ್ದರು. ಸರ್ಕಾರದ ಬೆಂಬಲದಿಂದಾಗಿ ಜಿಲ್ಲಾಡಳಿತದಿಂದ ಯುಗಾದಿಯ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲು ಸಾಧ್ಯವಾಗಿದೆ. ಯಾವುದೇ ಸರ್ಕಾರ ಇರಲಿ, ಅಧಿಕಾರಿಗಳಿರಲಿ ಇಂತಹ ಕಾರ್ಯಕ್ರಮ ಪ್ರತಿವರ್ಷ ನಡೆಸಬೇಕು. ಜಿಲ್ಲೆಯವನಾಗಿ ಸದಾ ಬೆಂಬಲಕ್ಕೆ ಸಿದ್ಧ. ನನ್ನ ಮೇಲಿನ ಪ್ರೀತಿಯಿಂದ ನಟ ಗೋಲ್ಡನ್ ಸ್ಟಾರ್ ಗಣೇಶ್, ಗಾಯಕ ವಿಜಯಪ್ರಕಾಶ್ ಇತರರು ಬಂದಿದ್ದಾರೆ. ಮುಂದಿನ ವರ್ಷ ಇನ್ನಷ್ಟು ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸೋಣ. ಡಿ.ದೇವರಾಜ್, ಎಸ್ಪಿ ಕೋಲಾರ