ಉಳ್ಳಾಗಡ್ಡಿ-ಖಾನಾಪುರ: ಧರ್ಮ ಮಾಧ್ಯಮದಿಂದ ಮೋಕ್ಷ ಪ್ರಾಪ್ತಿ ಸಾಧ್ಯ. ಯುಕ್ತಿ, ಭಕ್ತಿ, ಶಕ್ತಿ ಈ ಮೂರೂ ಇದ್ದರೆ ಮುಕ್ತಿ ನಿಶ್ಚಿತ ಎಂದು ಧರ್ಮಕೇಸರಿ ಆಚಾರ್ಯ ಶ್ರೀ 108 ಜಿನಸೇನ ಮುನಿ ಮಹಾರಾಜರು ಹೇಳಿದರು.
ಗ್ರಾಮದಲ್ಲಿ ಭಾನುವಾರ ಪಂಚಕಾಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಮಾನವನ ಕುಲದ ಒಳಿತಿಗಾಗಿ ಮಾಡುತಿದ್ದು ಜೈನ ಧರ್ಮದ ಪರಂಪರೆಯನ್ನು ಇಂದಿನ ಯುವಕರು ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಜೈನ ಸಮುದಾಯದ ಕಮಿಟಿ ಅಧ್ಯಕ್ಷ, ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ ಮಾತನಾಡಿ, ಜೈನ ಧರ್ಮ ಉಳಿದಿದ್ದರೆ ಇಂದು ತಾಯಂದಿರರಿಂದ ಉಳಿದಿದೆ. ಎಂದರು. ಕ್ಷುಲಕ ಶ್ರೀಜಯಸೇನ ಮಹಾರಾಜ, 105 ನಿರಮೋಹಿನಿಮತಿ ಮಾತಾಜಿ, 105 ನಿರಲೋಭಿಮತಿ ಮಾತಾಜಿ, 105 ನಿರದೋಷಿಮತಿ ಮಾತಾಜಿ, 105 ನಿಸ್ಸಂಗಮತಿ ಮಾತಾಜಿ, ಮುಂತಾದ ಮುನಿಗಳು ಹಾಗೂ ಮಾತಾಜಿಯವರು, ಪವನ ಚಂದರ ಉಪಾಧ್ಯೆ, ಜೀನೇಂದ್ರ ಶ್ರೀಕಾಂತ ಉಪಾಧ್ಯ, ವೃಷಭ ಉಪಾಧ್ಯೆ, ಮಹಾವೀರ ಉಪಾಧ್ಯೆ, ನಿರ್ದೇಶಕ ಚೇತನ ಪಾಟೀಲ, ರಾಜು ಅವಟೆ ಇತರರಿದ್ದರು.