ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯ ಅಟ್ಲಾಂಟಿಕ್ಸ್ ವಿವಿಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಹೇರಳ ಅವಕಾಶ ಒದಗಿಸಿದೆ. ಜತೆಗೆ ಯುಎಸ್‌ಎನಲ್ಲಿ ಇಂಜಿನಿಯರಿAಗ್ ಉನ್ನತ ಶಿಕ್ಷಣ ಪಡೆಯಲು ವಿಶಾಲ ಮಾರ್ಗ ತೆರೆದಿದೆ ಎಂದು ಅಟ್ಲಾಂಟಿಕ್ಸ್ ವಿವಿ ವ್ಯವಸ್ಥಾಪಕ ನಿರ್ದೇಶಕ ಕೈಲಾಶ ಚಿಂತಾಮಣಿ ಹೇಳಿದರು.
ಶರಣಬಸವ ವಿವಿ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಜನರೇಟಿವ್ ಎಐ ಇನ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕುರಿತ ಅಂತಾರಾಷ್ಟಿçÃಯ ಕರ‍್ಯಾಗಾರ ಉದ್ಘಾಟಿಸಿದ ಅವರು, ಯುಎಸ್‌ಎ ಫ್ಲಾರಿಡಾ ಮಿಯಾಮಿಯಲ್ಲಿರುವ ಅಟ್ಲಾಂಟಿಕ್ಸ್ ವಿವಿಯಲ್ಲಿ ಶರಣಬಸವ ವಿವಿ ಇಬ್ಬರು ವಿದ್ಯಾರ್ಥಿಗಳು ಮಾಸ್ಟರ್ ಆಫ್ ಸೈನ್ಸ್ ಕೋರ್ಸ್ಗೆ ಸೇರಿದ್ದಾರೆ. ಅಟ್ಲಾಂಟಿಕ್ಸ್ ವಿವಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯ ಉಜ್ವಲವಾಗಿದೆ ಎಂದರು.
ಅಟ್ಲಾAಟಿಕ್ಸ್ ವಿವಿಯಲ್ಲಿ ನಿಯಮಿತ ತರಬೇತಿ ಜತೆಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಐಟಿ ಟ್ರೇನಿಂಗ್ ನೀಡಲಾಗುತ್ತದೆ. ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಉದ್ಯೋಗಾವಕಾಶಕ್ಕೂ ವಿವಿ ಸಹಾಯ ಮಾಡಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿ ಉಪಕುಲಪತಿ ಡಾ.ಅನಿಲಕುಮಾರ ಬಿಡವೆ ಮಾತನಾಡಿ, ಪ್ರಸ್ತುತ ಶತಮಾನ ಆರ್ಟಿಫಿಶಿಯಲ್ ಇಂಟೆಲಿಜನ್ಸ್ಗೆ ಸಮರ್ಪಿತವಾಗಿದೆ. ನಮ್ಮ ವಿವಿ ಪದವಿಪೂರ್ವ ಶಿಕ್ಷಣದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಮಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಡೇಟಾ ಸೈನ್ಸ್ ವಿಷಯ ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾರ್ಗ ತೆರೆದಿದೆ ಎಂದು ತಿಳಿಸಿದರು.
ಅಮೆರಿಕದ ಅಟ್ಲಾಂಟಿಕ್ಸ್ ಮತ್ತು ಜರ್ಮನಿ ಇತರ ವಿದೇಶಿ ವಿವಿಗಳೊಂದಿಗೆ ಶರಣಬಸವ ವಿಶ್ವವಿದ್ಯಾಲಯ ಮಾಡಿಕೊಂಡಿರುವ ತಿಳಿವಳಿಕೆ ಒಪ್ಪಂದ ಉಲ್ಲೇಖಿಸಿದ ಬಿಡವೆ, ಅಭಿವೃದ್ಧಿ ಹೊಂದಿದ ದೇಶಗಳ ವಿವಿಗಳ ಜತೆಗಿನ ಒಪ್ಪಂದದ ಮುಖ್ಯ ಉz್ದೆÃಶ ಇತ್ತೀಚಿನ ಮತ್ತು ಸಂಬAಧಿತ ಹೊಸ ತಂತ್ರಜ್ಞಾನಗಳೊAದಿಗೆ ಉನ್ನತ ಶಿಕ್ಷಣದಲ್ಲಿ ಶರಣಬಸವ ವಿವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೋರ್ಸ್ ತರುವುದಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ರಾಷ್ಟçಗಳ ವಿವಿಗಳು ಇತ್ತೀಚಿನ ಉದಯೋನ್ಮುಖ ತಂತ್ರಜ್ಞಾನ ಹೆಚ್ಚು ವೇಗವಾಗಿ ಅಳವಡಿಸಿಕೊಂಡಿವೆ. ಈ ತಂತ್ರಜ್ಞಾನ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ನಿವಾರಿಸಲು ಶರಣಬಸವ ವಿವಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಶಿಕ್ಷಣ ನೀಡಲು ಈ ವಿವಿಗಳ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.
ಬೆಂಗಳೂರಿನ ಎಡ್ವೆಂಚರ್ಸ್ ನಿರ್ದೇಶಕ ಡಾ.ಅರುಣಚಂದ್ರ ಮುಧೋಳ್ ಮಾತನಾಡಿ, ವಿದ್ಯಾರ್ಥಿಗಳು ಕೋರ್ಸ್ಗೆ ಸೇರಲು ಸಾಲ ಸೌಲಭ್ಯ ಮತ್ತು ವಿದೇಶಿ ವಿವಿಗಳಲ್ಲಿ ಈ ಕೋರ್ಸ್ ಪ್ರವೇಶದ ವಿವರ ಮಾಹಿತಿ ನೀಡಿದರು.
ಬಾಂಗ್ಲಾದೇಶದ ಢಾಕಾದಲ್ಲಿರುವ ಸ್ಮಾರ್ಟ್ ಯೂನಿವರ್ಸಿಟಿ ಇನ್ನೋವೇಶನ್ ಹಬ್‌ನಲ್ಲಿ ತರಬೇತುದಾರ ದಿಪೇಶ್ ಬಾನಿಕ್ ಅವರು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ಜನರೇಟಿವ್ ಎಐ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶರಣಬಸವ ವಿವಿ ಕುಲಸಚಿವ ಡಾ.ಎಸ್.ಜಿ. ಡೊಳ್ಳೇಗೌಡರ್, ನಿರ್ದೇಶಕ ಪ್ರೊ.ವಿ.ಡಿ. ಮೈತ್ರಿ, ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ಸಂಶೋಧನಾ ನಿರ್ದೇಶಕಿ ಡಾ.ಸುಜಾತಾ ಮಲ್ಲಾಪುರ, ಡೀನ್ ಇಂಜಿನಿಯರಿAಗ್ ಟೆಕ್ನಾಲಜಿ (ಕೋ-ಎಡ್) ಡಾ.ಶಿವಕುಮಾರ ಜವಳಗಿ ಇತರರಿದ್ದರು.