ಜಿಲ್ಲೆ

ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ

ಬಳ್ಳಾರಿ : ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹಾದೇವಪ್ಪ , ಗೃಹ ಸಚಿವ ಪರಮೇಶ್ವರನ್ನು ಅವರನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮೈಸೂರಿನಲ್ಲಿ ಸಾಮಾನ್ಯವಾಗಿ ಸಭೆ ನಡೆಸಿದ್ದು, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಜಿಪಂ ಆವರಣದಲ್ಲಿ ಕೆಡಿಪಿ ಸಭೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಎಚ್. ಸಿ. ಮಹಾದೇವಪ್ಪ ಅವರ ಮನೆಯಲ್ಲಿ ಊಟಕ್ಕೆ ಸೇರಿದ್ದಾರೆ ಅಷ್ಟೇ ಇದರಲ್ಲಿ ಏನು ವಿಶೇಷತೆ ಇಲ್ಲ. ಆ ಸಭೆಯಲ್ಲಿ ಯಾವುದೇ ಸಿಎಂ ಬದಲಾವಣೆ ಚರ್ಚೆ ಕೂಡ ನಡೆದಿಲ್ಲ. ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಮುಂದಿಟ್ಟು ಚರ್ಚೆಯಾದ ಬಳಿಕ ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಶಾಸಕರಾದ ನಾರಾ ಭರತರೆಡ್ಡಿ, ಜೆ. ಎನ್. ಗಣೇಶ ಇದ್ದರು.