ಬೆಂಗಳೂರು: ಕರೊನಾ ಸೋಂಕು ರಾಜ್ಯದಲ್ಲಿ ತೀವ್ರಗೊಂಡಿರುವ ಸಂದರ್ಭದಲ್ಲೇ, ಕರೊನಾ ನಿರ್ವಹಣೆ ಖರ್ಚು ವೆಚ್ಚದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವಿನ ಜಂಗಿಕುಸ್ತಿಯೂ ಜೋರಾಗಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಆರೋಪಗಳ ಮಳೆ ಸುರಿಸಿದರೆ, ಸರ್ಕಾರದ ಪರವಾಗಿ ಐವರು ಸಚಿವರು ಸ್ಪಷ್ಟನೆ ನೀಡಿದರಲ್ಲದೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕರೊನಾ ನಿರ್ವಹಣೆಗಾಗಿ ಮಾಡಿದ ಖರೀದಿ ಮತ್ತಿತರ ಬಾಬ್ತುಗಳಲ್ಲಿ 2 ಸಾವಿರ ಕೋಟಿ ರೂ. ಅಧಿಕಾರಿಗಳು ಮತ್ತು ಸಚಿವರ ಜೇಬಿಗೆ ಹೋಗಿದೆ, ಹೀಗಾಗಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ಇದಕ್ಕೆ ಪ್ರತಿ ಯಾಗಿ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಶಿವರಾಮ ಹೆಬ್ಬಾರ್ ಮತ್ತು ಆರ್.ಅಶೋಕ್ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಆರೋಪಗಳಿಗೆ ಸ್ಪಷ್ಟನೆ ನೀಡಿದರು.
ಸರ್ಕಾರ ಡ್ರಾ್ಯಗರ್ ಕಂಪನಿಯ ವೆಂಟಿಲೇಟರ್ ಖರೀದಿಸಿದೆ. ಅದು ವಿಶ್ವದಲ್ಲೇ ಅತ್ಯುತ್ತಮ ಬ್ರಾಂಡ್. ನಿಮ್ಮ ಮನೆಯಲ್ಲೇ ವೈದ್ಯರಿದ್ದಾರೆ. ಬೇರೆ ತನಿಖೆಯ ಅಗತ್ಯವಿಲ್ಲ. ಅವರನ್ನೇ ಕೇಳಿದರೂ ಗೊತ್ತಾಗುತ್ತದೆ. | ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ (ಸಿದ್ದರಾಮಯ್ಯ ಉದ್ದೇಶಿಸಿ)
ಏಟು- ಎದಿರೇಟು ಕಾಂಗ್ರೆಸ್ ಆರೋಪ
2. ವೆಂಟಿಲೆಟರ್, ಮಾಸ್ಕ್, ಸ್ಯಾನಿಟೈಸರ್ನ ಮಾರುಕಟ್ಟೆ ಬೆಲೆ ವಿಚಾರ ಪ್ರಸ್ತಾಪ, ನೆರೆರಾಜ್ಯದ ಬೆಲೆಗೂ ಕರ್ನಾಟಕದಲ್ಲಿ ಖರೀದಿಸಿದ ಬೆಲೆಗೂ ತಾಳೆಹಾಕಿ ಅನುಮಾನ
3. ಸರ್ಕಾರ ದಾಖಲೆಗಳನ್ನು ನೀಡದೇ ಸತ್ಯ ಮುಚ್ಚಿಡುತ್ತಿದೆ ಎಂಬ ಆರೋಪ ಮಾಡಿ, ನ್ಯಾಯಾಂಗ ತನಿಖೆಗೆ ಆಗ್ರಹ
ಸರ್ಕಾರದ ವಾದ
2. ಕರೊನಾ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಪುನಶ್ಚೇತನ ಮಾಡುತ್ತೇವೆ ಅಂದುಕೊಂಡಿದ್ದರೆ ಅದು ನಿಮ್ಮ ಭ್ರಮೆ ಎಂದು ಟೀಕೆ 3. ಮೈತ್ರಿ ಸರ್ಕಾರದ ಅವಧಿಯಲ್ಲಿ ಖರೀದಿಸಿದ ವೆಂಟಿಲೇಟರ್ ದಾಖಲೆ ಬಿಡುಗಡೆ
ಸರ್ಕಾರ ನಾಲ್ಕು ತಿಂಗಳಲ್ಲಿ 4,167 ಕೋಟಿ ರೂ. ಖರ್ಚು ಮಾಡಿದೆ. ಅದರಲ್ಲಿ 2 ಸಾವಿರ ಕೋಟಿ ರೂಪಾಯಿ ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದೆ. ನ್ಯಾಯಾಂಗ ತನಿಖೆಗೆ ಒಪ್ಪಿಸಲು ಹೆದರಿಕೆ ಏಕೆ? | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ