ಜಿಲ್ಲೆ

ಯಾದಗಿರಿಯಲ್ಲಿ ಪಟೇಲ್ ಮೂರ್ತಿ ಸ್ಥಾಪನೆ

ಚನ್ನಬಸಯ್ಯ ಗುರುವಿನ

ಯಾದಗಿರಿ: ಹೈದರಾಬಾದ್ ಸಂಸ್ಥಾನ ಮುಕ್ತಿದಾದಾ, ದೇಶದ ಮೊದಲ ಗೃಹ ಸಚಿವ ಸರ್ಧಾರ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ನಿಮಿತ್ತ ಇಲ್ಲಿನ ಜಿ¯್ಲÁ ಕ್ರೀಡಾಂಗಣದಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೂರ್ತಿ ಸ್ಥಾಪನೆ ಕುರಿತು ಈಗಾಗಲೇ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕದ ಈ ಏಳು ಜಿಲ್ಲೆಗಳಿಗೆ ೧೯೪೮ರ ಸೆ.೧೭ ಸ್ವಾತಂತ್ರÈ ಸಿಕ್ಕಿದ್ದು, ಹೈದರಾಬಾದ್ ಪ್ರಾಂತ್ಯ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಂಡಿದ್ದರಿAದ ಆರಂಭದಲ್ಲಿ ಹೈಕ ವಿಮೋಚನಾ ದಿನಾಚರಣೆ ಆಚರಿಸಲಾಗುತ್ತಿತ್ತು. ಅದು ಈಗ ಕಲ್ಯಾಣ ಕರ್ನಾಟಕ ಉತ್ಸವ ಎಂದು ಆಚರಿಸಲಾಗುತ್ತಿದೆ. ಇದು ಸಾವಿರಾರು ಜನರ ತ್ಯಾಗ ಬಲಿದಾನದ ಪರಿಣಾಮದಿಂದ ಲಭಿಸಿದೆ ಎಂದರು.

ಸರ್ಧಾರ ಶರಣಗೌಡ ಇನಾಂದಾರ್, ಚನ್ನಬಸಪ್ಪ ಕುಳಗೇರಿ ಸೇರಿ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕರು ಮಾಡಿದ ಹೋರಾಟದ ಫಲ ಹಾಗೂ ಪಟೇಲ್ ಅವರ ಮಿಲಟರಿ ಕಾರ್ಯಚರಣೆಯಿಂದಾಗಿ ಮುಕ್ತಿ ಲಭಿಸಿದೆ. ರಾಜ್ಯ ಸರ್ಕಾರ ಪಂಚಗ್ಯಾರAಟಿಗಳ ಮೂಲಕ ಜನಪರ ಕೆಲಸ ಮಾಡುತ್ತಿದ್ದು, ಹಿಂದುಳಿದ ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನAತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ಈ ವೇಳೆ ಸ್ವಚ್ಛತೆಯೇ ಸೇವೆಗೆ ಚಾಲನೆ ನೀಡಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಧಾನ ಪರಿಷತ್ ವಿರೋಧ ಪP್ಷÀದ ನಾಯಕ ಛಲವಾದಿ ನಾರಾಯಣಸ್ವಾಮಿ, ಯೂಡಾ ಅಧ್ಯP್ಷÀ ವಿನಾಯಕ ಮಾಲಿಪಾಟೀಲ್, ಜಿ¯್ಲÁಧಿಕಾರಿ ಡಾ.ಸುಶೀಲಾ, ಜಿ¯್ಲÁ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರ್ಡಿಯಾ, ಅರಣ್ಯ ಸಂರP್ಷÀಣಾಧಿಕಾರಿ ಕಾಜೋಲï ಪಾಟೀಲ್, ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಹೆಚ್ಚುವರಿ ಜಿ¯್ಲÁಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿ ಅನೇಕರು ಇದ್ದರು.