ಜಿಲ್ಲೆ

ಯಾದಗಿರಿ ನಗರಸಭೆಗೆ ಅನಪುರ ಅಧ್ಯಕ್ಷೆ

ಯಾದಗಿರಿ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ನಗರಸಭೆ ಗದ್ದುಗೆಗೆ ಗುರುವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ತಲಾ ೧೯ ಮತ ಪಡೆಯುವ ಮೂಲಕ ಬಿಜೆಪಿಯ ಹಿರಿಯ ಸದಸ್ಯೆ ಲಲಿತಾ ಅನಪುರ ಮತ್ತು ರುಖಿಯಾ ಬೇಗಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಗಾದರೂ ಮಾಡಿ ಅಧಿಕಾರಕ್ಕೇರಬೇಕೆಂಬ ಕಾಂಗ್ರೆಸ್ ಹೀನಾಯ ಸೋಲುಂಡರೆ, ಎರಡನೇ ಅವಧಿಗೆ ನಗರಸಭೆ ಬಿಜೆಪಿ ಮಡಿಲಿಗೆ ಬಿದ್ದಂತಾಗಿದೆ.
ಬೆಳಗ್ಗೆ ೧೦ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಲಲಿತಾ ಅನಪುರ ಹಾಗೂ ಕಾಂಗ್ರೆಸ್ ಬೆಂಬಲಿತ ಜೆಡಿಎಸ್‌ನ ಜಯಮ್ಮ ಮಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರುಖಿಯಾ ಬೇಗಂ ಹಾಗೂ ಕಾಂಗ್ರೆಸ್‌ನ ಗೌಸಿಯಾ ಬೇಗಂ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾದ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ನಾಮಪತ್ರ ಪರಿಶೀಲನೆ ಬಳಿಕ ಚುನಾವಣೆ ಪ್ರಕ್ರಿಯೆ ಆರಂಭಿಸಿದರು.

ಬಿಜೆಪಿಯ ೧೩, ಜೆಡಿಎಸ್ ಮತ್ತು ಪಕ್ಷೇತರ ತಲಾ ಒಬ್ಬ ಹಾಗೂ ಎಂಎಲ್‌ಸಿ ಛಲವಾದಿ ನಾರಾಯಣ ಸ್ವಾಮಿ ಅವರ ಒಂದು ಸೇರಿ ೧೯ ಮತ ಪಡೆಯುವ ಮೂಲಕ ಬಿಜೆಪಿಯ ಲಲಿತಾ ಅನಪುರ ಮತ್ತು ರುಖಿಯಾ ಬೇಗಂ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಪ್ರಕಟಿಸಿದರು.

ಕಾಂಗ್ರೆಸ್‌ನ ೧೩ ಸದಸ್ಯರು ಮತ್ತು ಎಂಎಲ್‌ಎ, ಎಂಪಿ ಸೇರಿ ೧೫ ಜನರು ಚುನಾವಣೆಯಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಬೇಕಾಗಿತ್ತು. ಆದರೆ ಕಾಂಗ್ರೆಸ್ ಸದಸ್ಯರಾದ ಮನ್ಸೂರ್ ಅಲಿಖಾನ್, ನಿರ್ಮಾಲಾದೇವಿ ಹಾಗೂ ಫಾತಿಮಾ ತಡವಾಗಿ ಬಂದಿದ್ದರಿAದ ಚುನಾವಣಾಧಿಕಾರಿಗಳು ಒಳಗೆ ಬಿಡಲಿಲ್ಲ. ಹೀಗಾಗಿ ಈ ಮೂವರು ಚುನಾವಣೆಯಿಂದ ಹೊರಗುಳಿದರು. ತಡವಾಗಿ ಏಕೆ ಬಂದರು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಂಸದ ಕುಮಾರ ನಾಯಕ ಹಾಗೂ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಗೈರು ಎದ್ದು ಕಾಣುವಂತೆ ಮಾಡಿತು. ಈ ಇಬ್ಬರು ಗೈರಾಗಿದ್ದರಿಂದ ಪಕ್ಷದ ಸೋಲು ಗ್ಯಾರಂಟಿ ಎಂಬ ಲೆಕ್ಕಚಾರದ ಮೇಲೆ ಬರಲಿಕ್ಕಿಲ್ಲ ಎಂಬ ಮಾತುಗಳು ಕೇಳಿಬಂದವು. ಹೀಗಾಗಿ ಕಾಂಗ್ರೆಸ್‌ನ ಇಬ್ಬರು ತಲಾ ೮ ಮತ ಪಡೆದು ಸೋಲುಂಡರು. ಗೆಲುವಿನ ಸುದ್ದಿ ಹೊರಬೀಳುತ್ತಿದಂತೆ ಹೊರಗಡೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಹಾಗೂ ಉಸ್ತುವಾರಿ ಡಾ.ಶೈಲೇಂದ್ರ ಬೆಲ್ದಾಳೆ, ಪಕ್ಷದ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಮುಖಂಡರಾದ ಮಹೇಶರಡ್ಡಿ ಮುದ್ನಾಳ್, ರಾಚನಗೌಡ ಮುದ್ನಾಳ್, ಮಲ್ಲಣ್ಣಗೌಡ ಹತ್ತಿಕುಣಿ, ದೇವಿಂದ್ರನಾಥ ನಾದ, ಹಣಮಂತ ಇಟಗಿ, ನಗರಸಭೆ ಮಾಜಿ ಅಧ್ಯP್ಷÀ ವಿಲಾಸ ಪಾಟೀಲï, ಗುರು ಕಾಮಾ, ವೆಂಕಟರೆಡ್ಡಿ ಅಬ್ಬೆತುಮಕೂರು, ಪರಶುರಾಮ ಕುರಕುಂದಿ, ಲಿಂಗಪ್ಪ ಹತ್ತಿಮನಿ, ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ ಇತರರಿದ್ದರು.