ಯಾದಗಿರಿ: ಕಳೆದ ಮೂರು ವರ್ಷಗಳ ಹಿಂದೆ ಕ್ರೆÊಸ್ತ ಧರ್ಮಕ್ಕೆ ಮತಾಂತರಗೊAq Àದಂಪತಿ ಮರಳಿ ಹಿಂದು ಧರ್ಮಕ್ಕೆ ಆಗಮಿಸಿದ ಘರ್‌ವಾಪ್ಸಿ ಘಟನೆಯೊಂದು ಇಲ್ಲಿನ ಹೊಸಳ್ಳಿ ತಾಂಡಾ ಬಳಿಯ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಕಾಲನಿಯಲ್ಲಿ ಬುಧವಾರ ನಡೆದಿದೆ.
ಅಲೆಮಾರಿ ಬುಡ್ಗ ಸಮುದಾಯದ ವೆಂಕಟೇಶ ದಂಪತಿಯೇ ಮರಳಿ ಹಿಂದು ಧರ್ಮಕ್ಕೆ ಬಂದವರು. ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜೇವರ್ಗಿಯ ಸಾಯಿಬಾಬಾ ಮಹಾರಾಜ್ ಅವರು ದೇವರ ಪೂಜೆ ನೆರವೇರಿಸಿ ಕುಟುಂಬಕ್ಕೆ ಸ್ವಾಗತಿಸಲಾಯಿತು. ನಂತರ ಜಂಗಮ ಪಾದಪೂಜೆ ನೆರವೇರಿಸಿದ ದಂಪತಿಗಳಿಗೆ ವೈಜನಾಥ ಸ್ವಾಮಿ ಹಿರೇಮಠ ರುದ್ರಾಕ್ಷಿ ಧಾರಣೆ ಮಾಡಿದರು. ಈ ವೇಳೆ ಅವರಿಗೆ ಹೂಮಳೆಯ ಸ್ವಾಗತ ನೀಡಲಾಯಿತು.
ಈ ವೇಳೆ ಮಾತನಾಡಿದ ಘರವಾಪ್ಸಿಯಾದ ವೆಂಕಟೇಶ, ಮೂರು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾದಾಗ ಕ್ರೆÊಸ್ತರು ಚರ್ಚ್ಗೆ ಬಂದು ಹೋಗುವುದು ಮಾಡು ನಿನಗೆ ಆರಾಮವಾಗುತ್ತದೆ ಎಂದು ಹೇಳಿದರು. ನಂತರ ಅನಂತಪುರ ಬಳಿಯ ಗುತ್ತಿಯಲ್ಲಿರುವ ಚರ್ಚ್ಗೆ ಕರೆದುಕೊಂಡು ಹೋಗಿ ಕೆಲ ಆಮಿಷ ಒಡ್ಡಿದ್ದರಿಂದ ಮತಾಂತರವಾಗಿದ್ದೆ. ನಂತರ ನನಗೆ ಅಸಮಾಧಾನ, ಮಾನಸಿಕ ತೊಳಲಾಟ, ಮನೆಯಲ್ಲಿ ಜಗಳ ಕಷ್ಟ, ನಷ್ಟ ಜಾಸ್ತಿಯಾದವು, ಅಲ್ಲದೆ ಕನಸಿನಲ್ಲಿ ನಮ್ಮ ಮನೆ ದೇವರಾದ ಕೊಯಿಲೂರು ಆಂಜಿನೇಯ ಪದೇ ಪದೆ ಬರುತ್ತಿದ್ದ. ಈ ಸಂಗತಿಯನ್ನು ನಮ್ಮ ಸಮಾಜದ ಮುಖಂಡರಿಗೆ ತಿಳಿಸಿದಾಗ ಅವರು ಮತ್ತೆ ನನಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದರು.
ಭಜರಂಗದಳದ ಕಲಬುರಗಿ ವಿಭಾಗೀಯ ಸಂಚಾಲಕ ಶಿವಕುಮಾರ ಸುಕಲೂರ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಮುದುಗಲ್, ಜಿಲ್ಲಾ ಖಜಾಂಚಿ ಶ್ರೀಶೈಲ ಹೊನ್ನೆ, ಜಿಲ್ಲಾ ಕಾರ್ಯದರ್ಶಿ ಅವಧೂತ ರಾವ ಕುಲಕರ್ಣಿ,ಶಿಳ್ಳೆಕ್ಯಾತರ ಸಮಾಜದ ಜಿಲ್ಲಾಧ್ಯಕ್ಷ ಖಂಡಪ್ಪ, ರಾಜ್ಯ ಕಾರ್ಯದರ್ಶಿ ಎಸ್.ವೈ. ಮಾರುತಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಶಿರವಾಟಿ, ಹುಚ್ಚಪ್ಪ ಕಟ್ಟಿಮನಿ, ಮಹಾದೇವ ಚಿಂತಾಮಣಿ, ಮಲ್ಲಯ್ಯ ಯಡವಲ್ಲಿ, ಮಾದೇವ ಸಾವೂರ, ರಡ್ಡಿ ಸಾವೂರ, ರೈತ ಸಂಘದ ಅಧ್ಯಕ್ಷ ಸೈದು ವಿಭೂತಿ, ಸಾಬಣ್ಣ ಶಿಳ್ಳೆಕ್ಯಾತ, ಮೊಗಲಯ್ಯ ಸಾಧು, ಕೃಷ್ಣ ಸಿತಾರಿ, ಶಿವು ಸಿತಾರಿ, ರಾಕೇಶ ಶಾಸ್ತಿç, ಬಸಲಿಂಗಪ್ಪ ಶಿರವಾಟಿ, ಅಶೋಕ, ಅಂಜಪ್ಪ, ಜಂಬಣ್ಣ ರಾಮತೀರ್ಥ, ಬಸವರಾಜ, ಮಾರೆಪ್ಪ ಸೇರಿದಂತೆ ಇತರರಿದ್ದರು.