ಬಾಗಲಕೋಟೆ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ, ಆನಂದ ಜಿಗಜಿನ್ನಿ ಇದ್ದರು.  
ಜಿಲ್ಲೆ

ಯಾಕೆ ನಮ್ಮ ದೇಶದಲ್ಲಿ ಗಂಡು, ಹೆಣ್ಣು ಸಿಗಲ್ವಾ...?

ಬಾಗಲಕೋಟೆ: ಭಾರತೀಯರ ಜೊತೆ ಪಾಕಿಸ್ತಾನದವರು ಸಂಬAಧ ಬೆಳೆಸುವವರರ ಪೈಕಿ ಶೇ.೯೦ ರಷ್ಟು ಉದ್ದೇಶವೇ ಬೇರೆ ಇರುತ್ತದೆ. ದೇಶಕ್ಕೆ ಏನಾದರೂ ಮಾಡಬೇಕು ಎಂದೇ ಅವರು ಇಲ್ಲಿಗೆ ಬರುತ್ತಾರೆ. ಅವರದ್ದು ನೆಟ್‌ವರ್ಕ್ ಇದೆ. ಅದನ್ನು ತೆಗೆದುಕೊಂಡು ಇಲ್ಲಿಗೆ ಬರುತ್ತಾರೆ. ಯಾಕೆ ಮದುವೆಯಾಗಲು ನಮ್ಮ ದೇಶದಲ್ಲಿ ಗಂಡು ಸಿಗುವುದಿಲ್ಲವಾ? ಅಥವಾ ಹೆಣ್ಣು ಸಿಗುವುದಿಲ್ಲವಾ?

ಭಾರತೀಯರ ಜೊತೆ ಪಾಕಿಸ್ತಾನಿಯರು ವಿವಾಹ ಸಂಬ0ಧ ಬೆಳೆಸುತ್ತಿರುವ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪಾಕಿಗಳ ಜೊತೆ ವಿವಾಹ ಸಂಬ0ಧ ಬೆಳೆಸುವವರ ಬಗ್ಗೆ ಈ ರೀತಿ ಅಸಮಧಾನ ಹೊರಹಾಕಿದ್ದಾರೆ.

ಅಲ್ಲಿಯವರನ್ನು (ಪಾಕಿಸ್ತಾನದವರನ್ನು) ಯಾಕೆ ಮದುವೆ ಆಗಬೇಕು? ಅವರ ಜೊತೆ ಸಂಬAಧ ಯಾಕೆ ಬೇಕು? ಏನು ಅವಶ್ಯಕತೆ ಇದೆ'? ಆ ದೇಶ ಟೆರರಿಸ್ಟ್ ಚಟುವಟಿಕೆಗಳಲ್ಲಿ ಇದ್ದಾಗ ಅವರ ಜೊತೆ ಸಂಬAಧ ಬೆಳೆಸುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಸಿಆರ್‌ಪಿಎ-ï ಯೋಧನ ಪತ್ನಿ ಪಾಕ್ ಪ್ರಜೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಇದೊಂದು ಈಗ ಸಿಕ್ಕಿದೆ. ಇನ್ನೂ ಇಂತಹ ಎಷ್ಟಿವೆಯೋ ಏನೋ? ಲೆಕ್ಕಕ್ಕಿಲ್ಲ. ನಮ್ಮಲ್ಲಿ ಇಂಟೆಲೆಜೆನ್ಸಿ ಸಂಪೂರ್ಣ fiಲ್ ಆಗಿದೆ. ಗೊತ್ತಿದ್ದರೂ ಅವರು ಸುಮ್ಮನಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸಚಿವ ಶಿವಾನಂದ ಪಾಟೀಲ ಅವರ ಟಾಕ್ ವಾರ್ ಹಾಗೂ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಹೊರಟ್ಟಿ ಅವರು, ಇದು ಹೇಗಾದಿದೆ ಎಂದರೆ ಹುಡುಗರು ಏನಾದರೂ ಗಲಾಟೆ ಮಾಡಿದರೆ ಶಿಕ್ಷಕರು ಬೈಯುತ್ತಾರೆ. ಆದರೆ, ಶಿಕ್ಷಕರೇ ಆ ರೀತಿ ಮಾಡಿದರೆ? ವಿಜಯಪುರ ಭಾಷೆಯಲ್ಲಿ ಹೇಳಲಾ? ಮಾಸ್ತರ್ ನಿಂತು.... ಮಾಡಿದರೆ ಹುಡುಗರು ಅಡ್ಡಾಡಿಕೊಂಡು... ಹೊಯ್ದರಂತೆ. ಇದು ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ ಅವರು, ಜನಪ್ರತಿನಿಽಗಳಾದ ನಮ್ಮ ಭಾಷೆ ಇನ್ನೊಬ್ಬರಿಗೆ ಮಾದರಿಯಾಗಿರಬೇಕು ಎಂದರು.

ಸಚಿವ ಪಾಟೀಲ ಅವರ ರಾಜೀನಾಮೆ ನೀಡಿರುವ ರೀತಿಗೂ ಟಾಂಗ್ ಕೊಟ್ಟ ಸಭಾಪತಿಗಳು, ರಾಜೀನಾಮೆ ಹೇಗಿರಬೇಕು ಎಂದರೆ ನಾನು ನನ್ನ ಕ್ಷೇತ್ರಕ್ಕೆ ನನಗೆ ಕೆಲವೊಂದು ಸಮಸ್ಯೆಗಳು ಇರುವುದರಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಇಷ್ಟು ಮಾತ್ರ ಇರಬೇಕು. ಎರಡು ಲೈನ್ ಬಿಟ್ಟು ಮೂರು ಲೈನ್ ಇರಬಾರದು. ನನ್ನ ಹೆಂಡತಿ ಬೈದಳು, ನನ್ನ ಮಕ್ಕಳು ಬೈದರು ಎಂದು ಬರೆಯೋಕೆ ಬರುವುದಿಲ್ಲ ಎಂದು ತಿಳಿಸಿದರು.