ಬಾಗಲಕೋಟೆ ನಗರದ ಬಿವಿವಿ ಸಂಘದ ಎಂ.ಬಿ.ಎ ಕಾಲೇಜಿನ ಸಭಾಭವನದಲ್ಲಿ ಗುರುವಾರ ಮಚಾನಿ ಗ್ರೋಪ್ ಬೆಂಗಳೂರ ಹಾಗೂ ಬಿವಿವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಹಯೋಗದೊಂದಿಗೆ ಯಶೋಧಾ ಇಂಡಿ ವಿಲ್ಹೇಜ್ ತಾಂತ್ರಿಕ ಸಂಸ್ಥೆ ಕಾರ್ಯಕ್ರಮ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿದರು. ಮಚಿನ ಗ್ರೂಪ್‌ನ ಕಾರ್ಯಾಧ್ಯಕ್ಷ ರಮೇಶ ಮಚನಿ, ಎಂ.ಡಿ ರವಿ ಮಚನಿ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಇತರರು ಇದ್ದರು. 
ಜಿಲ್ಲೆ

ಯಶೋಧಾ ಇಂಡಿ ವಿಲ್ಹೇಜ್ ನಿಂದ ಉದ್ಯೋಗ ಅವಕಾಶ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಬಿವಿವಿ ಸಂಘದ ಸಹಯೋಗದೊಂದಿಗೆ ಆರಂಭವಾಗಿರುವ ಯಶೋಧಾ ಇಂಡಿ ವಿಲ್ಹೇಜ್ ತಾಂತ್ರಿಕ್ ಸಂಸ್ಥೆಯಿಂದ ಈ ಭಾಗದ ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಎಂ.ಬಿ.ಎ ಕಾಲೇಜಿನ ಸಭಾಭವನದಲ್ಲಿ ಗುರುವಾರ ಮಚಾನಿ ಗ್ರೋಪ್ ಬೆಂಗಳೂರ ಹಾಗೂ ಬಿವಿವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಹಯೋಗದೊಂದಿಗೆ ಯಶೋಧಾ ಇಂಡಿ ವಿಲ್ಹೇಜ್ ತಾಂತ್ರಿಕ ಸಂಸ್ಥೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿವಿವಿ ಸಂಘದ ಆರ್.ಡಿ.ಎಪ್ ನಿಂದ ಅಂದಾಜು ೪೦ ಸಾವಿರ ಜನರಿಗೆ ಸ್ವಯಂ ವೃತ್ತಿ ತರಬೇತಿ ನೀಡಿದ್ದೇವೆ. ಜೊತೆಗೆ ಜನ ಶಿಕ್ಷಣ ಸಂಸ್ಥೆ, ಕಮ್ಯುನಿಟಿ ಪಾಲಿಟೆಕ್ನಿಕ್‌ನಲ್ಲಿ, ಸ್ಟೇಪ್‌ನಲ್ಲಿ, ಸೈನ್ಸ್ ಆಂಡ್ ಟೆಕ್ನಾಲಜಿಯಿಂದಲು ನಾವು ಸಾವಿರಾರು ವಿದ್ಯಾರ್ಥಿಗಳಿಗೆ ಯುವಕರಿಗೆ ಅನೇಕ ಉದ್ಯೋಗಪರ ವೃತ್ತಿ ತರಬೇತಿಗಳನ್ನು ನೀಡುತ್ತಾ ಬಂದಿದ್ದೇವೆ. ಈ ಇಂಡಿವಿಲ್ಲೇಜ್ ತಾಂತ್ರಿಕ ಸಂಸ್ಥೆ ತರಬೇತಿ ನೀಡುವುದರ ಜೊತೆಗೆ ಅವರಿಗೆ ಉದ್ಯೋಗವನ್ನು ನೀಡುವ ಸಂಸ್ಥೆಯಾಗಿದೆ. ಈ ಭಾಗದ ನಿರೂದ್ಯೋಗಿ ಯುವಕರು ಇದರ ಸದಪಯೋಗ ಪಡೆದುಕೋಳ್ಳಬೇಕು. ತರಬೇತಿ ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗ ಸಿಗಲಿ ಆಶಿಸಿದರು.

ಮಚಿನ ಗ್ರೂಪ್‌ನ ಕಾರ್ಯಾಧ್ಯಕ್ಷ ರಮೇಶ ಮಚನಿ ಮಾತನಾಡಿ, ಬಾಗಲಕೋಟೆ ಜನತೆಗೆ ಸಹಾಯವಾಗುವ ನಿಟ್ಟಿನಲ್ಲಿ ಇಲ್ಲಿ ೧೦ ನೇ ಬ್ರ‍್ಯಾಂಚ್ ಬಿವಿವಿ ಸಂಘದ ಸಹಯೋಗದಲ್ಲಿ ಪ್ರಾರಂಭಿಸಿದ್ದೇವೆ. ಯುವ ಜನಾಂಗ ಸರ್ಕಾರಿ ನೌಕರಿಗಾಗಿ ಅಲಿಯದೆ, ಸ್ವಂತ ಉದೋಗದತ್ತ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ನಿಮ್ಮಲ್ಲಿರುವ ಕೌಶಲ ಗುರುತಿಸಿ ನಿಮಗೆ ತರಬೇತಿ ಜೊತೆಗೆ ಉದ್ಯೋಗ ನೀಡುವ ಮಹದಾಸೆ ಈ ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಚನಿ ಗ್ರೂಪನ್ ಎಂ.ಡಿ ರವಿ ಮಚನಿ ಮಾತನಾಡಿ, ಇಂದಿನ ಯವ ಜನಾಂಗ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಸಾಕಷ್ಟು ಉದ್ಯೋಗಗಳನ್ನು ಸೃಷ್ಠಿ ಮಾಡಿಕೊಳ್ಳಬಹುದು. ಹಣವಿಲ್ಲದೆ ಉದ್ಯೋಗ ಮಾಡುವುದು ಹೇಗೆ? ಕಡಿಮೇ ಹಣದಲ್ಲಿ ಉದ್ಯಮಿಯಾಗುವ ಬಗ್ಗೆ ಮಾಹಿತಿ ನೀಡಿದರು. ಜನರ ಆರ್ಥಿಕತೆ ಸದೃಢಪಡಿಸುವ ಉದ್ದೇಶ ನಮ್ಮದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಚನಿ ಗ್ರೂಪ್‌ನ ಸಿ.ಎಚ್.ಆರ್.ಒ ಶ್ರೀಕಾಂತ ಅರಿಮಾಂತಯ್ಯ, ಇಂಡಿ ವಿಲ್ಹೇಜ್ ಸಿಬ್ಬಂದಿ ಮುಖ್ಯಸ್ಥ ಪ್ರಿಯಾಂಕ ಮಲ್ಹೋತ್ರ, ಆರ್.ಡಿ.ಎಪ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಿ.ಎಸ್.ಅಂಗಡಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ವೀರಣ್ಣ ಹಲಕುರ್ಕಿ, ಸಂಗಣ್ಣ ಕಲಾದಗಿ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ, ರಾಮಣ್ಣ ಜುಮನಾಳ, ಮಹೇಶ ಕಕರೆಡಿ ಉಪಸ್ಥಿತರಿದ್ದರು.