ಬಾಗಲಕೋಟೆ ನಗರದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಆರ್.ಎನ್.ಆಯುರ್ವೇದಿಕ ಮೆಡಿಕಲ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧನ್ವಂತರಿ ಹೋಮ ಹಾಗೂ ಶಿಶ್ಯೋಪನಯನ ಕಾರ್ಯಕ್ರಮ ಡಾ.ಪ್ರಸನ್ನ ಎನ್.ರಾವ ಉದ್ಘಾಟಿಸಿದರು.  
ಜಿಲ್ಲೆ

ಯಶಸ್ಸಿನ ಶಿಕ್ಷಣಕ್ಕಾಗಿ ಪರಿಶ್ರಮ ಅಗತ್ಯ

ಬಾಗಲಕೋಟೆ: ಶ್ರೇಷ್ಠ ಶಿಕ್ಷಣ ಪಡೆದುಕೊಂಡು ಯಶಸ್ಸಿನ ಬದುಕನ್ನ ಕಟ್ಟಿಕೊಳ್ಳಲು ಶಿಕ್ಷಣ ಪಡೆಯುವಾಗ ಪರಿಶ್ರಮ ಅಗತ್ಯವಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ನಾವೆಲ್ಲ ಸಾಗಬೇಕು ಎಂದು ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸನ್ನ ಎನ್.ರಾವ ಹೇಳಿದರು.

ನಗರದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಆರ್.ಎನ್.ಆಯುರ್ವೇದಿಕ ಮೆಡಿಕಲ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧನ್ವಂತರಿ ಹೋಮ ಹಾಗೂ ಶಿಶ್ಯೋಪನಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿನ್ನನ್ನು ನೀನು ಎಚ್ಚರಿಸಿಕೊಂಡಾಗ, ಅರ್ಥ ಮಾಡಿಕೊಂಡಾಗ ಜಗತ್ತು ನಿಮ್ಮನ್ನು ಗುರುತಿಸುತ್ತದೆ. ಅಲ್ಲದೆ ಆರೋಗ್ಯ ಹಾಗೂ ಸಂತೋಷದ ಮಾರ್ಗಗಳ ಬಗ್ಗೆ ಮೆಡಿಕಲï ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ತೋವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ ಮಾತನಾಡಿ, ಇಂದಿನ ದಿನಕ್ಕೆ ಆಯುರ್ವೇದ ಪದ್ಧತಿ ಹಾಗೂ ಆಯುರ್ವೇದಿಕ ಔಷಽಗಳು ಅತಿ ಅವಶ್ಯಕವಾಗಿದೆ. ಪ್ರತಿಯೊಬ್ಬರು ಬಳಕೆ ಮಾಡಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಮಾತನಾಡಿ, ಸಂಸ್ಥೆಯಲ್ಲಿ ಓದುತ್ತಿರುವ ಮೆಡಿಕಲ್ ವಿದ್ಯಾರ್ಥಿಗಳ ಸಂಶೋಧನೆಗೆ ಉಪಯುಕ್ತ ಸಹಾಯಕ್ಕೆ ಸಂಸ್ಥೆ ಸದಾ ಕಾಲ ಸಿದ್ದವಾಗಿರುತ್ತದೆ ಎಂದರು.

ಬೆಳಗ್ಗೆ ಧನ್ವಂತರಿ ಹೋಮ ಹಾಗೂ ಶಿಶ್ಯೋಪನಯನ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಆಯುರ್ವೇದಿಕ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಲ್ಹಾದ ಬಿ ಗಂಗಾವತಿ, ಡಾ.ಮಂದಾ ಗಂಗಾವತಿ, ಕಾಲೇಜಿನ ಡೀನ್ ಡಾ.ಶಿವಕುಮಾರ ಗಂಗಾಲ, ತೇಜಸ್ ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯ ಸಚಿನ ಭಾತ್ರಾ, ಪ್ರಾಧ್ಯಾಪಕ ಡಾ.ವಿಜಯಕುಮಾರ ಚವಡಿ, ಡಾ.ದೀಪಾ ಗಂಗಾಲ, ಡಾ. ವೀಣಾ, ಡಾ.ರೇಖಾ ಸಕ್ರಿ, ಡಾ.ಸಪ್ನಾ ರಜಪೂತ, ಡಾ. ಸರಸ್ವತಿ ಇದ್ದರು. ಡಾ.ವೀಣಾ ಕುಲಕರ್ಣಿ ಹಾಗೂ ಡಾ. ವಿಜಯಕುಮಾರ ಚವಡಿ ನಿರೂಪಿಸಿದರು. ಡಾ.ಅತಿರಾ ಸೋಮನ ಸ್ವಾಗತಿಸಿದರು. ಡಾ.ದೀಪಾ ಗಂಗಾಲ ವಂದಿಸಿದರು.