ಜಿಲ್ಲೆ

ಯಳ್ಳೂರಲ್ಲಿ ಯುವಕನಿಗೆ ಚಾಕು ಇರಿತ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಹೊಲದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ಗಲಾಟೆ

ಬೆಳಗಾವಿ: ತಾಲೂಕಿನ ಯಳ್ಳೂರ ಗ್ರಾಮದ ಹೊರವಲಯದಲ್ಲಿ ಎಣ್ಣೆ ಪಾರ್ಟಿ ಮಾಡುವ ವೇಳೆ ಗಲಾಟೆಯಾಗಿ ಓರ್ವನಿಗೆ ಚಾಕು ಇರಿದಿರುವ ಟನೆ ಶುಕ್ರವಾರ ನಡೆದಿದೆ.

ಯಳ್ಳೂರ ಗ್ರಾಮದ ಪ್ರಕಾಶ ಚತುರ (51) ಚಾಕು ಇರಿತದಿಂದ ಗಾಯಗೊಂಡ ವ್ಯಕ್ತಿ. ಹೋಳಿ ಹಬ್ಬದ ಹಿನ್ನೆಲೆ ಯುವಕರ ಗುಂಪು ಹೊಲದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಆರಂಭಗೊಂಡ ಗಲಾಟೆ ಒಬ್ಬರಿಗೊಬ್ಬರು ಹೊಡೆಕೊಂಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಯುವಕನಿಗೆ ಚಾಕು ಇರಿದಿದ್ದಾರೆ. ತೀವ್ರ ಗಾಯಗೊಂಡ ವ್ಯಕ್ತಿ ಬಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್​ ಆಯುಕ್ತ ಇಡಾ ಮಾರ್ಟಿನ್​ ಮಾರ್ಬನ್ಯಾಂಗ್​ ತಿಳಿಸಿದ್ದಾರೆ.