ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷೆ ವೈ.ಎಲ್.ನವೀನ್, ಉಪಾಧ್ಯಕ್ಷೆ ಚೈತ್ರಾ ರವಿಕುಮಾರ್ ಅವರನ್ನು ಸದಸ್ಯರು ಅಭಿನಂದಿಸಿದರು. ಶ್ರೀನಿವಾಸ್, ಸೋಮೇಶ್, ಮಂಜುಶ್ರೀ, ಪ್ರೇಮಾ ಇತರರಿದ್ದರು.  
ಜಿಲ್ಲೆ

ಯಳ್ಳಂಬಳಸೆ ಗ್ರಾಪಂಗೆ ನವೀನ್ ಅಧ್ಯಕ್ಷ

ಕಡೂರು: ಯಳ್ಳಂಬಳಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವೈ.ಎಲ್.ನವೀನ್, ಉಪಾಧ್ಯಕ್ಷೆಯಾಗಿ ಚೈತ್ರಾ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಗ್ರಾಪಂನಲ್ಲಿ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾಗಿ ಬೀರೂರು ಬಿಇಒ ರುದ್ರಪ್ಪ ಕಾರ್ಯನಿರ್ವಹಿಸಿದರು.

ಅಭಿನಂದನಾ ಸಭೆಯಲ್ಲಿ ಅಧ್ಯಕ್ಷ ವೈ.ಎಲ್.ನವೀನ್ ಮಾತನಾಡಿ, ಯಳ್ಳಂಬಳಸೆ ಗ್ರಾಮದಲ್ಲಿ ಚರಂಡಿ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುದಾನ ಬಂದ ನಂತರ ಚರಂಡಿ ಕಾಮಗಾರಿಗಳಿಗೆ ಒತ್ತು ನೀಡುತ್ತೇನೆ. ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆಯಲ್ಲಿ ಯಾವುದೆ ತೊಡಕಿಲ್ಲ. ಎಲ್ಲ ಸದಸ್ಯರ ಸಹಕಾರದೊಂದಿಗೆ ಅಭಿವದ್ಧಿ ಮಾಡಲಾಗುವುದು ಎಂದರು.

ಶ್ರೀನಿವಾಸ್, ಸೈಯಾದ್ ಸಲೀಮ್, ಸೋಮೇಶ್, ಮಂಜುಶ್ರೀ ಪ್ರವೀಣ್, ಪ್ರೇಮಾ ಕೇಶವ, ದೀಪಾ ಹನುಮಂತಪ್ಪ, ಪಿಳ್ಳೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ದೇವಾನಂದ್, ಜೀಗಣೆಹಳ್ಳಿ ನೀಲಕಂಠಪ್ಪ, ರವಿಕುಮಾರ್, ಚಿಕ್ಕನಾಯ್ಕನಹಳ್ಳಿ ಮೂರ್ತಣ್ಣ, ಅಮಾಜಾನ್, ನಾಗರಾಜ್, ಶ್ವೇತಾ ನವೀನ್, ರತ್ನಮ್ಮ, ಪಿಡಿಒ ಇಸ್ಮಾಯಿಲ್, ಕಾರ್ಯದರ್ಶಿ ಪರಮೇಶ್ವರಪ್ಪ ಇದ್ದರು.