ಕಡೂರು: ಯಳ್ಳಂಬಳಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚೈತ್ರಾ, ಉಪಾಧ್ಯಕ್ಷರಾಗಿ ಪುಷ್ಪಲತಾ ಅವಿರೋಧವಾಗಿ ಆಯ್ಕೆಯಾದರು.
ಚೈತ್ರಾ ಉಪಾಧ್ಯಕ್ಷೆಯಾಗಿದ್ದರು. ಗುರುವಾರ ಚೈತ್ರಾ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಾಮಾನ್ಯ ಮಹಿಳೆಯ ಉಪಾಧ್ಯಕ್ಷ ಸ್ಥಾನಕ್ಕೆ ಪುಷ್ಪಲತಾ ಸೋಮೇಶ್ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್ ಅವರು ಅವಿರೋಧ ಆಯ್ಕೆ ಘೋಷಿಸಿದರು.
ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷೆ ಚೈತ್ರಾ ರವಿಕುಮಾರ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ಉಪಾಧ್ಯಕ್ಷ ಸ್ಥಾನದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದೇನೆ. ಗ್ರಾಪಂಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಸದಸ್ಯರಾದ ಸೈಯಾದ್ ಸಲೀಂ, ಶ್ರೀನಿವಾಸ್, ನವೀನ್, ಕೆ.ಎಂ.ಸೋಮೇಶ್, ಮಂಜುಶ್ರೀ ಪ್ರವೀಣ್, ಪ್ರೇಮಾವತಿ, ವೈ.ಬಿ. ಈಶ್ವರಪ್ಪ, ಪಿಡಿಒ ಶುಭಲಕ್ಷ್ಮೀ, ಸೋಮೇಶ್ವರ ದೇವಾಲಯದ ಧರ್ಮದರ್ಶಿ ಕೆ.ಬಿ.ಸೋಮೇಶ್, ಪುರಸಭೆ ಸದಸ್ಯ ಈರಳ್ಳಿ ರಮೇಶ್, ವೈ.ಡಿ.ನಾಗರಾಜ್, ಎಸ್.ಕೆ.ಜಗದೀಶ್, ವೈ.ಕೆ.ಮುದಿಯಪ್ಪ, ಮಂಜುನಾಥ್, ಲಕ್ಕಪ್ಪ, ಮಲ್ಲೇಶಪ್ಪ, ರವಿಶಂಕರ್ ಹಾಗೂ ಗ್ರಾಮಸ್ಥರು ಇದ್ದರು.