ಕಲಬುರಗಿ: ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಶ್ರೀ ಸಿದ್ಧಾರೂಢ ಮಠದ ರಜತ ಮಹೋತ್ಸವ, ಶ್ರೀ ಪರಮಾನಂದ ಸ್ವಾಮೀಜಿಗಳ ದ್ವಾದಶ ಪಟ್ಟಾಧಿಕಾರಿ ಮಹೋತ್ಸವ ನಿಮಿತ್ತ ಜ.೩೦ರಿಂದ ಫೆ.೩ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುನಾಥ ಶಿವಪುರೆ ಹೇಳಿದರು.
ಶ್ರೀ ಪರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ಜ.೩೦ರಂದು ಬೆಳಗ್ಗೆ ೮ಕ್ಕೆ ಶ್ರೀ ಸಿದ್ಧಗಿರಿ ತಪೋವನದಲ್ಲಿ ೧೦೦೮ ಸುಮಂಗಲೆಯರ ಉಡಿ ತುಂಬುವುದು, ಅನಂತ ಸಹಸ್ರ ಕುಂಬ, ಕಲಶದೊಂದಿಗೆ ಶ್ರೀ ಸಿದ್ಧಾರೂಢರ ಅಮೃತ ಶಿಲಾ ಮೂರ್ತಿಯ ಆಗಮನ, ಮಹಾತ್ಮರನ್ನು ೨೫ ಜೋಡೆತ್ತುಗಳ ಭವ್ಯ ಮೆರವಣಿಗೆ ಮೂಲಕ ಮಠಕ್ಕೆ ಸ್ವಾಗತ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೩೦ರಂAದು ಬೆಳಗ್ಗೆ ೯.೩೦ಕ್ಕೆ ಶಂಕರಾ ನೋಡು ನಿನ್ನನ್ನೇ ಪರಿಭವದ ಬಾಧೆಯನು ವಿಷಯ ಕುರಿತು ಪ್ರವಚನ ನಡೆಯಲಿದೆ. ಸಂಜೆ ೬ಕ್ಕೆ ಕಂಡು ಕೇಳಿ ಮತ್ತೆ ಮೋಹಿಪರೆ ಬಲ್ಲವರು ಕುರಿತು ಪ್ರವಚನ ನಡೆಯಲಿದೆ. ಜ.೩೧ರಂದು ಬೆಳಗ್ಗೆ ೯.೩೦ಕ್ಕೆ `ನೆನೆವುದನುದಿನದುದಯ ಕಾಲದೆಚ್ಚರಿಕೆಯೊಳು' ಪ್ರವಚನ ನಡೆಯಲಿದೆ. ಸಂಜೆ ೬ಕ್ಕೆ ಅನುಪಮಾಚಲ ಭಕ್ತಿ ಭಾವಾನುಕೂಲನೆ ಶಂಭುಲಿAಗ ಪ್ರವಚನ ನೆರವೇರಲಿದೆ. ಡಾ.ಶಿವಕುಮಾರ ಸ್ವಾಮೀಜಿಗಳ ಸಾನ್ನಿಧ್ಯ ವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯ ಅತಿಥಿಗಳಾಗಿ, ಅತಿಥಿಗಳಾಗಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಫೆ.೧ರAದು ಬೆಳಗ್ಗೆ ೯.೩೦ಕ್ಕೆ ಜಾಣನು ಲೌಕಿಕ ಪಾರಮಾರ್ಥವೆರಡನು ಕುರಿತು ಪ್ರವಚನವಿದ್ದು, ಜಿಡಗಾ ಮುಗಳಕೋಡದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ ೬ಕ್ಕೆ ಸಂಗ ಲೇಸು ಸಾಧು ಮಹಾಪುರುಷರ ಪ್ರವಚನದಲ್ಲಿ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅನುಭವಾಂಕುರ ಕಿರು ಪುಸ್ತಕ ಬಿಡುಗಡೆ ನಡೆಯಲಿದೆ ಎಂದರು.
ಫೆ.೨ರAದು ಬೆಳಗ್ಗೆ ೯.೩೦ಕ್ಕೆ ಶ್ರೀ ಜಯೇಂದ್ರಪುರಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪ್ರಸಾದ ನಿಲಯ ಉದ್ಘಾಟನೆ, ಪ್ರವಚನ ನಡೆಯಲಿದೆ. ಸಂಜೆ ೬ಕ್ಕೆ ಭಾರತೀಯ ಕೃಷಿ, ಸಂಸ್ಕೃತಿ ಕುರಿತು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿz್ದÉÃಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗುಜರಾತ್‌ನ ಗೋಪಾಲಬಾಯ ಸುತಾರಿಯ ಪಾಲ್ಗೊಳ್ಳಲಿದ್ದಾರೆ ಎಂದರು.
ಜ.೩ರAದು ಬೆಳಗ್ಗೆ ೯.೩೦ಕ್ಕೆ ನ ಗುರೋರಧಿಕಂ ಕುರಿತು ಪ್ರವಚನವಿದ್ದು, ಹವಾಮಲ್ಲಿನಾಥ ಸ್ವಾಮೀಜಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಭಾಗವಹಿಸಲಿದ್ದಾರೆ. ಸಂಜೆ ಪಲ್ಲಕ್ಕಿ ಮಹೋತ್ಸವ ಹಾಗೂ ಕೈಲಾಸ ಮಂಟಪ ಮಹಾಪೂಜೆ ನೆರವೇರಲಿದೆ. ಐದು ದಿನದ ಕಾರ್ಯಕ್ರಮದಲ್ಲಿ ನೂರಾರು ಪೂಜ್ಯರು ಭಾಗವಹಿಸಿ, ಆಶೀರ್ವದಿಸಲಿದ್ದಾರೆ ಎಂದರು.
ಪ್ರಮುಖರಾದ ವೀರಣ್ಣ ಎಲ್ದೆ, ಶಿವಕುಮಾರ ಎಲ್ದೆ, ಸೂರ್ಯಕಾಂತ ಎಲ್ದೆ ಇತರಿದ್ದರು.
ತಪಾಸಣೆ, ಗೌರವ ಸತ್ಕಾರ: ಫೆ.೧ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಲಿದೆ. ಫೆ.೨ರಂದು ಉಚಿತ ನೇತ್ರ ತಪಾಸಣೆ ನಡೆಯಲಿದೆ. ಉಚಿತ ಗೋಕೃಪಾಮೃತ ವಿತರಿಸಲಾಗುವುದು. ವಿವಿಧ ಕ್ಷೇತ್ರದ ೨೫ ಸಾಧಕರಿಗೆ ವಿಶೇಷ ಗೌರವ ಸತ್ಕಾರ ನಡೆಯಲಿದೆ ಎಂದು ಗುರುನಾಥ ಶಿವಪುರೆ ತಿಳಿಸಿದರು.