ಯಲ್ಲಾಪುರ:ಪಟ್ಟಣದ ಹಾದಿಬಾವಿಗಲ್ಲಿಯಲ್ಲಿ ಮನೆಯೊಳಗೆ ನುಗ್ಗಿ ಹಣ, ಆಭರಣ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮನಗರದ ಶೊಹೆಬ್ ಮಹಮ್ಮದ್ ಗೌಸ್ ಚಿಗರಳ್ಳಿ ಬಂಧಿತ ವ್ಯಕ್ತಿ. ಈತ ಹಾದಿಬಾವಿಗಲ್ಲಿಯ ನಿವೃತ್ತ ಶಿಕ್ಷಕ ತಮ್ಮಣ್ಣ ಸುಬ್ರಾಯ ಭಟ್ಟ ಅವರ ಮನೆಯ ಹಿಂದಿನ ಬಾಗಿಲು ಮುರಿದು ಒಳಹೊಕ್ಕು ಬಂಗಾರದ ಚೈನ್, ಬಂಗಾರದ ಗಟ್ಟಿ ಹಾಗೂ 3000 ನಗದು ಸೇರಿ 1.25 ಲಕ್ಷ ರೂ ಮೌಲ್ಯದ ಸ್ವತ್ತನ್ನು ಕಳವು ಮಾಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಿದ ಆಭರಣ, ಹಣ ವಶಪಡಿಸಿಕೊಳ್ಳಲಾಗಿದೆ.
ಎಸ್ ಪಿ ಸುಮನ್ ಪೆನ್ನೆಕರ್, ಎಎಸ್ ಪಿ ಬದರಿನಾಥ, ಡಿವೈಎಸ್ ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ, ಪಿಎಸ್ಐ ಅಮೀನಸಾಬ್ ಅತ್ತಾರ, ಪ್ರೊ.ಪಿಎಸ್ಐ ಉದಯ.ಡಿ, ಸಿಬ್ಬಂದಿ ಬಸವರಾಜ, ಮಹಮ್ಮದ್ ಶಫಿ, ಗಜಾನನ, ಗಿರೀಶ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.