ಯಲ್ಲಮ್ಮನ ಗುಡ್ಡದಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸವದತ್ತಿ ತಾಲೂಕು ಘಟಕದ ಸದಸ್ಯರು ಶನಿವಾರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜಿರಗ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಉದಯಕುಮರ ಚಿಕ್ಕಣ್ಣವರ, ಪ್ರಕಾಶ ಮಲ್ಲೂರ, ಸುಭಾನಿ ಮಗಟಖಾನ್ ಇದ್ದರು. 
ಜಿಲ್ಲೆ

ಯಲ್ಲಮ್ಮನಗುಡ್ಡದಲ್ಲಿ ಮೂಲ ಸೌಕರ್ಯ ಒದಗಿಸಲು ಆಗ್ರಹ

ಉಗರಗೋಳ, ಬೆಳಗಾವಿ: ಶ್ರೀ ರೇಣುಕಾ ಯಲ್ಲಮ್ಮನಗುಡ್ಡ ಹಾಗೂ ಜೋಗುಳಭಾವಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಹಾಗೂ ಅಲ್ಲಿನ ಅಂಗಡಿಗಳ ಮೇಲಿರುವ ಅನ್ಯ ಭಾಷೆ ಬ್ಯಾನರ್‌ಗಳನ್ನು ಕೂಡಲೆ ತೆರವುಗೊಳಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜಿರಗ್ಯಾಳ ಅವರಿಗೆ ಸವದತ್ತಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಶನಿವಾರ ಮನವಿ ಸಲ್ಲಿಸಲಾಯಿತು.

ಪ್ರಸಿದ್ಧ ಶಕ್ತಿಪೀಠಗಳಲ್ಲೊಂದಾದ ಶ್ರೀಕ್ಷೇತ್ರ ಯಲ್ಲಮ್ಮನ ದೇವಸ್ಥಾನಕ್ಕೆ ಪ್ರತಿವರ್ಷ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಶ್ರೀ ರೇಣುಕಾ ಯಲ್ಲಮ್ಮನ ದರ್ಶನಕ್ಕೆಂದು ಬರುತ್ತಾರೆ. ಆ ಭಕ್ತರಿಗೆ ಸರಿಯಾಗಿ ಶುದ್ಧ ನೀರಿನ ಘಟಕ, ಶೌಚಾಲಯ, ಯಾತ್ರಿ ನಿವಾಸ, ಮಹಿಳೆಯರಿಗೆ ಶೌಚಾಲಯ ಹಾಗೂ ಬಟ್ಟೆ ಬದಲಿಸಲು ಪ್ರತ್ಯೇಕ ಕಟ್ಟಡ, ಪ್ರತ್ಯೇಕ ಸ್ನಾನಗೃಹ ನಿರ್ಮಿಸಬೇಕು ಎಂದರು.

20ರೂ. ಬೆಲೆಯ ನೀರಿನ ಬಾಟಲಿಗಳನ್ನು 40ರೂ. ಗೆ ಮಾರಾಟ ಮಾಡುತ್ತಿದ್ದು ಇಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ತಾಲೂಕಿನ ದಂಡಾಧಿಕಾರಿಗಳು ಮುತುವರ್ಜಿ ವಹಿಸಿ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಸದಸ್ಯರು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ಉದಯಕುಮರ ಚಿಕ್ಕಣ್ಣವರ, ಪ್ರಕಾಶ ಮಲ್ಲೂರ, ಸುಭಾನಿ ಮಗಟಖಾನ್, ಗೀರಿಶ ಆಳದ, ಶರ್ೀ ನದ್ಾ, ಕಿರಣ ಸಂಪಗಾವಿ, ಮಂಜು ಸೊಗಲದ, ಕರೆಪ್ಪ ಬೆಲಗಾವಿ, ಾಜಲ್ ಲಮಾನಿ, ಭರತ ಕಿನ್ನಣ್ಣವರ ಹಾಗೂ ಇತರರು ಇದ್ದರು.