ಜಿಲ್ಲೆ

ಯಲವಟ್ಟಿ ಆಂಜನೇಯ ಸ್ವಾಮಿಯ ಕಾರ್ಣಿಕ

ಹರಿಹರ: ಭೂಲೋಕದಿಂದ ಕಾಳಿಂಗ ಸರ್ಪ ಎದ್ದಿತ್ತು, ಆ ಸರ್ಪ ಮುತ್ತಿನ ಹಾರಕ್ಕೆ ತಳಕು ಹಾಕಿತಲೇ ಎಚ್ಚರ ಎಂದು ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿಯ ಕಾರ್ಣಿಕ ನುಡಿಯಿತು.
ನಗರದ ತುಂಗಭದ್ರಾ ನದಿಯ ದಡದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ನಾಗಪಂಚಮಿಯಂದು ತಾಲೂಕಿನ ಯಲವಟ್ಟಿ ಗ್ರಾಮದ ಆಂಜನೇಯ ಸ್ವಾಮಿಯ ಕಾರ್ಣಿಕ ನುಡಿಯುವುದು ಪ್ರತಿ ವರ್ಷದ ಪ್ರತೀತಿ.
ಈ ಬಾರಿ ಸೋಮವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿಯ ದೈವವಾಣಿಯನ್ನು ಪೂಜಾರಪ್ಪ ನುಡಿದರು.
ಹರಿಹರ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಹಲವು ಗ್ರಾಮಗಳ ವಿವಿಧ ದೇವತಾ ಮೂರ್ತಿಗಳು ನದಿಯಲ್ಲಿ ಪೂಜೆ ಸಲ್ಲಿಸಿ ನಂತರ ನದಿಯ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನ ಅವರಣದಲ್ಲಿ ಸೇರಿದ್ದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಕಾರ್ಣಿಕ ಮುಗಿದ ನಂತರ ಗೋವಿಂದಾ ಗೋವಿಂದ ಎಂಬ ಜಯಘೋಷ ಕೂಗಿದರು.