ಆಲಮಟ್ಟಿ: ಈ ತಿಂಗಳ ಮೂರನೇ ಶನಿವಾರ ಮಾ.20 ರಂದು ಸುಕ್ಷೇತ್ರ ಯಲಗೂರದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡುವ ಹಿನ್ನೆಲೆ ಪೂರ್ವಭಾವಿ ಸಭೆ ನಡೆಯಿತು.
ಯಲಗೂರ ಗ್ರಾಪಂ ಸಭಾಭವನದಲ್ಲಿ ಬುಧವಾರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸ್ತೆ, ಸ್ಮಶಾನ ಜಾಗೆ, ಮೂಲಭೂತ ಸೌಕರ್ಯಗಳು, ಸಾಮಾಜಿಕ ಭದ್ರತೆ, ಪಿಂಚಣಿ ಯೋಜನೆ, ವಿದ್ಯುತ್ ಸರಬರಾಜು, ಬೆಳೆ ಹಾನಿಗೀಡಾದ ರೈತರ ಖಾತೆಗೆ ಪರಿಹಾರ ಧನ ಜಮೆ ಸೇರಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಇಒ ವಿ.ಎಸ್. ಹಿರೇಮಠ, ಕೆಬಿಜೆನ್‌ಲ್‌ನ ಎಇಇ ವಿಶ್ವನಾಥ ಬಡಿಗೇರ, ಸಹಾಯಕ ತೋಟಗಾರಿಕೆ ಅಧಿಕಾರಿ ಬಿ.ಒ. ನಂದ್ಯಾಳ, ಕೃಷಿ ಸಹಾಯಕ ಅಧಿಕಾರಿ ಬಿ.ಬಿ. ಸಕ್ರಿ, ಗ್ರಾಮಲೆಕ್ಕಾಧಿಕಾರಿ ಜಿ.ಸಿ. ಜೂಲಗುಡ್ಡ, ಪಿಡಿಒ ಈರಣ್ಣ ಬಡಿಗೇರ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಶ್ಯಾಮ ಪಾತ್ರದ, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಡಾ.ಆರ್.ಎಸ್. ಪಾಟೀಲ, ಬಿಸಿಎಂ ಅಧಿಕಾರಿ ಎಲ್.ಬಿ. ಜಾಧವ ಇತರರಿದ್ದರು.