ಆಲಮಟ್ಟಿ ಸಮೀಪದ ಯಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ರೇಣುಕಾ ನೀಲಪ್ಪ ಚಲವಾದಿ, ಉಪಾಧ್ಯಕ್ಷರಾಗಿ ರಂಗನಾಥ ಭೀಮಣ್ಣ ಪೂಜಾರ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ವಿಜಯೋತ್ಸವ ಆಚರಿಸಲಾಯಿತು. ಶ್ಯಾಮ ಪಾತ್ರದ, ಭೀಮಣ್ಣ ಅವಟಗೇರಿ, ಹಣಮಂತಗೌಡ ಪಾಟೀಲ, ಮುತ್ತಣ್ಣ ಮುತ್ತಣ್ಣವರ, ಐ.ಐ. ವಾಲಿಕಾರ, ಯಲ್ಲಾಲಿಂಗ ಬಿರಾದಾರ, ಗುರುಪಾದಪ್ಪಗೌಡ ಪಾಟೀಲ, ಪರಶು ಅಮಾತೆಗೌಡರ, ಅಶೋಕ ಹುಲ್ಲಳ್ಳಿ, ಗುಂಡಪ್ಪ ತಳವಾರ ಇತರರಿದ್ದರು. 
ಜಿಲ್ಲೆ

ಯಲಗೂರ ಗ್ರಾಪಂಗೆ ಅವಿರೋಧ ಆಯ್ಕೆ

ಆಲಮಟ್ಟಿ: ಸಮೀಪದ ಯಲಗೂರು ಗ್ರಾಪಂ ಅಧ್ಯಕ್ಷೆಯಾಗಿ ರೇಣುಕಾ ಚಲವಾದಿ, ಉಪಾಧ್ಯಕ್ಷರಾಗಿ ರಂಗನಾಥ ಪೂಜಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಪಂ ಕಾರ್ಯಾಲಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ಚಲವಾದಿ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ರಂಗನಾಥ ಪೂಜಾರ ನಾಮಪತ್ರ ಸಲ್ಲಿಸಿದ್ದರು.

ಇವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ, ತಾಪಂ ಇಒ ವಿ.ಎಸ್. ಹಿರೇಮಠ ಘೋಷಿಸಿದರು. ಚುನಾವಣೆಯಲ್ಲಿ ಎಲ್ಲ 15 ಸದಸ್ಯರು ಭಾಗವಹಿಸಿದ್ದರು.

ವಿಜಯೋತ್ಸವ: ಅವಿರೋಧ ಆಯ್ಕೆಯಾಗುತ್ತಿದ್ದಂತೆ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಲಾಯಿತು. ಸಿಹಿ ತಿನ್ನಿಸಿ ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಬೆಂಬಲಿಗರು ಡಿಜೆ ಸೌಂಡ್‌ನೊಂದಿಗೆ ಹೆಜ್ಜೆ ಹಾಕಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮುಖಂಡ ಶ್ಯಾಮ ಪಾತ್ರದ, ಭೀಮಣ್ಣ ಅವಟಗೇರಿ, ಹಣಮಂತಗೌಡ ಪಾಟೀಲ, ಮುತ್ತಣ್ಣ ಮುತ್ತಣ್ಣವರ, ಐ.ಐ. ವಾಲಿಕಾರ, ಯಲ್ಲಾಲಿಂಗ ಬಿರಾದಾರ, ಗುರುಪಾದಪ್ಪಗೌಡ ಪಾಟೀಲ, ಪರಶು ಅಮಾತೆಗೌಡರ, ಅಶೋಕ ಹುಲ್ಲಳ್ಳಿ, ಗುಂಡಪ್ಪ ತಳವಾರ ಇತರರಿದ್ದರು.