ಜಿಲ್ಲೆ

ಯರಬಳ್ಳಿಗೆ ನ್ಯಾಯಮೂರ್ತಿ ಭೇಟಿ

ಚಿತ್ರದುರ್ಗ: ಹೈಕೋರ್ಟ್ ನ್ಯಾಯಮೂರ್ತಿ ಸಿದ್ದಪ್ಪ ಸುನಿಲ್‌ದತ್ ಯಾದವ್ ಜಿಲ್ಲೆಯ ಹಿರಿಯೂರು ತಾಲೂಕಿನ ಯರಬಳ್ಳಿ ಗೊಲ್ಲರಹಟ್ಟಿಗೆ ಭೇಟಿ ನೀಡಿ, ಹಾಲುಕುಡಿದ ಸ್ವಾಮಿಯ ನೂತನ ದೇಗುಲ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು.

ತಾಯಿ ಗಿರಿಜಮ್ಮ ಸಿದ್ದಪ್ಪ, ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ಗ್ರಾಮದ ಮುಖಂಡರು ಇದ್ದರು.