ಜಿಲ್ಲೆ

ಯತ್ನಾಳ ಹೇಳಿಕೆ ಖಂಡನೀಯ

ಹುಬ್ಬಳ್ಳಿ: ಶ್ರೀ ರಾಮನವಮಿ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ ಹೇಳಿದ್ದಾರೆ.

ಸಭ್ಯತೆ, ಸಂಸ್ಕಾರ, ಮಾನವತ್ವದ ಪಾಠವನ್ನು ಕಲಿಸಿದ ಶ್ರೀರಾಮನ ಆದರ್ಶಗಳು ಹಾಗೂ ಆ ದಿನದ ಮಹತ್ವವನ್ನು ತಿಳಿಸಿ ಹೇಳುವುದನ್ನು ಬಿಟ್ಟು, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಅವರನ್ನು ಹೀಯಾಳಿಸುವ ಮೂಲಕ ಯತ್ನಾಳ ತಮ್ಮ ಬಾಯಿ ಚಪಲ ತೀರಿಸಿಕೊಂಡಿದ್ದಾರೆ ಎಂದಿದ್ದಾರೆ.