ಅಥಣಿ ಗ್ರಾಮೀಣ: ಬಿಜೆಪಿಯಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಮರುಪರಿಶೀಲಿಸುವಂತೆ ಕೇಂದ್ರ ನಾಯಕರ ಗಮನಸೆಳೆಯಲು ಅಥಣಿ ಕ್ಷೇತ್ರದ ಸಮಸ್ತ ಹಿಂದುಗಳಿಂದ ಅಥಣಿ ಪಟ್ಟಣದಲ್ಲಿ ಏ.೧ರಂದು ಸಂಜೆ ೪ ಗಂಟೆಗೆ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹಿಂದು ಸಂಘಟನೆಯ ಯುವ ಮುಖಂಡ ಧರೆಪ್ಪ ಠಕ್ಕಣ್ಣವರ ಹೇಳಿದರು.
ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರ ಜತೆಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಅಥಣಿ ಶಿವಾಜಿ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತವರೆಗೆ ಬೃಹತ್ ಪ್ರತಿಭಟನೆ ಜರುಗಲಿದೆ. ಹಾಗಾಗಿ ತಾಲೂಕಿನ ಹಿಂದುಗಳು, ಯುವಜನರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸತ್ಯಪ್ಪ ಬಾಗೆಣ್ಣವರ, ವೀರೇಂದ್ರ ಕಾಗವಾಡೆ, ಹರೀಶ ಶಿರೂರ, ನಿಶಾಂತ ದಳವಾಯಿ, ವಿರಾಜ ಪಾಟೀಲ, ಚೇತನ ಪಾಟೀಲ, ವಿವೇಕ ಯಲಗುದ್ರಿ, ಅಶೋಕ ಯಲಹಡಗಿ, ಸಂತೋಷ ಗಾಳಿ, ರಾಜು ಬಸಗೌಡರ, ಅವಿನಾಶ ಜಾಧವ ಇತರರಿದ್ದರು.