ಯಡ್ರಾಮಿ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ಮಾಣಶಿವಣಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಆಟಗಳಲ್ಲಿ ಸೋಲು- ಗೆಲುವು ಸಾಮಾನ್ಯ. ಪ್ರತಿ ವಿದ್ಯಾರ್ಥಿಯೂ ಕ್ರೀಡಾ ಮನೋಭಾವದೊಂದಿಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಕರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮದರ್‌ಖಾನ್ ಪಠಾಣ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಲವಂತ್ರಾಯ ಬಿರಾದಾರ, ಪ್ರಮುಖರಾದ ಪುಂಡಲೀಕ ಜಾಲವಾದಿ, ಬಸವರಾಜ ನಾಗರಾಳ, ಕೆಂಚಪ್ಪ ಡೋಣಿ, ಶಾಂತಪ್ಪ ಬಿರಾದಾರ, ನಿಂಗಣ್ಣ ದೊಡಮನಿ, ಮಲ್ಲಿಕಾರ್ಜುನ ಕೋಣಸಿರಸಗಿ, ಬಸವರಾಜ ಪಾಟೀಲ್ ಯತ್ನಾಳ, ಲಕ್ಷö್ಮಣ ದೊಡ್ಡಮನಿ, ಸಂಗನಗೌಡ ಪಾಟೀಲ್, ಬಸವರಾಜ ತೆಲಕರ, ಅಲ್ಲಾಪಟೇಲ್ ಚಿಂಚೋಳಿ, ವಿಜಯಕುಮಾರ ಬಡಿಗೇರ ಇತರರಿದ್ದರು.