ಅರಳಗುಂಡಗಿ (ಯಡ್ರಾಮಿ): ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯP್ಷÀ ಬಲವಂತರಾಯ ಬಿರಾದಾರ ಹೇಳಿದರು.
ಮುರಗಾನೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಅರಳಗುಂಡಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಸರ್ಕಾರ ಕೊಡುವ ಕಡಿಮೆ ಹಣದಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಕಷ್ಟವಾಗಿದ್ದರೂ ಗ್ರಾಮಸ್ಥರು ಮತ್ತು ಪಾಲಕರ ಸಹಕಾರದಿಂದ ಅತ್ಯುತ್ತಮ ಸಮಾರಂಭ ನಡೆಸಿರುವುದು ಖುಷಿ ತಂದಿದೆ ಎಂದರು.
ಉಪ ತಹಸೀಲ್ದಾರ್ ಸತ್ಯಪ್ರಕಾಶ, ಬಿಇಒ ಮದರ್‌ಖಾನ್ ಪಠಾಣ್, ಬಿಆರ್‌ಸಿ ಎಸ್.ಟಿ. ಬಿರಾದಾರ, ಪ್ರಮುಖರಾದ ಶಾಂತಪ್ಪ ಬಿರಾದಾರ, ಎಸ್.ಎಸ್. ಮಾಲಿಬಿರಾದಾರ, ಲಕ್ಷö್ಮಣ ದೊಡ್ಡಮನಿ, ವಿಜಯಕುಮಾರ ಬಡಿಗೇರ, ಮಹಾಂತೇಶ ಜೋತೆಪ್ಪಗೋಳ, ರುದ್ರಗೌಡ ತೊಳನೂರ, ಶ್ರೀಶೈಲ ಬಿರಾದಾರ, ಕರೆಪ್ಪಗೌಡ ಕಾಳಗಿ, ಶಿವಪುತ್ರಪ್ಪ ಸುಂಬಡ, ಸಿದ್ದಣ್ಣ ಬಾಲಪ್ಪಗೋಳ, ದೇವಿಂದ್ರ ಬಿರಾದಾರ, ಶಿವಲಿಂಗಪ್ಪ ಕಾಶೆಪ್ಪಗೋಳ, ಸುನೀಲ್ ಎಮ್ಮೆನವರ್, ಕಾಂತು ಹೊಸಮನಿ, ಮಡಿವಾಳಪ್ಪ ನಗನೂರ, ಸಂತೋಷ ಗತ್ತರಗಿ ಇತರರಿದ್ದರು.