ಶಹಾಪುರ: ಯಕ್ಷಗಾನ ನಮ್ಮ ನಾಡಿನ ಸಾಂಸ್ಕೃತಿಕ ಪಾರಂಪರಿಕ ಕಲೆ ಮತ್ತು ಶಾಸ್ತಿçÃಯ ಕಲೆಗಳಲ್ಲಿ ಒಂದಾಗಿದೆ ಎಂದು ಕುಂಬಾರಗೇರಿ ಹಿರೇಮಠದ ಪೀಠಾಧಿಪತಿ ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಹೇಳಿದರು.
ನಗರದ ವೈಷ್ಣವಿ ಸಭಾಂಗಣದಲ್ಲಿ ಇಲ್ಲಿನ ಉಡುಪಿ ಹೊಟೇಲ್ ಮಾಲೀಕರ ಬಳಗ ಬುಧವಾರ ರಾತ್ರಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಯಕ್ಷಗಾನದಲ್ಲಿ ಮಹಾಭಾರತ, ರಾಮಯಣ, ಭಾಗವತ ಗೀತೆ, ಪುರಾಣ ಕಥೆಗಳ ಪ್ರಸಂಗಗಳನ್ನು ಕಾವ್ಯ ಸ್ವರೂಪದೊಂದಿಗೆ ಮತ್ತು ಅದಕ್ಕೆ ತಕ್ಕುದಾದ ವಿಶಿಷ್ಠ ವೇಷ ಭೂಷಣಗಳೊಂದಿಗೆ ನೋಡುಗರ ಮನಸ್ಸಿಗೆ ಮುಟ್ಟುವಂತೇ ಕಲಾವಿದರು ಪ್ರದರ್ಶನ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂದರು.
ಇAತಹ ವೈಭವಯುತ ಕಲೆ ಉಳಿಸಿ ಬೆಳೆಸುವ ಜತೆಗೆ ಉತ್ತರ ಕರ್ನಾಟಕ ಭಾಗಕ್ಕೂ ಅದರ ಬೆಳವಣಿಗೆಯಾಗುವಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿ ಹೊಟೇಲ್ ಮಾಲೀಕರ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಏಕದAಡಿಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಉತ್ತಮ ಸಾಂಸ್ಕೃತಿಕ ಕಲೆಗಳಲ್ಲಿ ಒಂದಾಗಿದ್ದು, ಅದನ್ನು ಬೆಳೆಸಿ ಪೋಷಿಸುವಲ್ಲಿ ಕರಾವಳಿ ಭಾಗದ ಕಲಾವಿದರ ಶ್ರಮ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಜ್ಯೋತಿರ್ಲಿAಗ ಮಠದ ಶ್ರೀ ವಿಶ್ವರಾಧ್ಯ ದೇವರು, ಚರಬಸವೇಶ್ವರ ಸಂಸ್ಥಾನದ ಶರಣು ಬಿ.ಗದ್ದುಗೆ ಮಾತನಾಡಿದರು. ಕಾರ್ಯಕ್ರಮವನ್ನು ಕಾಂಗ್ರೆಸ್ ಹಿರಿಯ ಮುಖಂಡ ಚಂದ್ರಶೇಖರ ಆರಬೋಳ ಉದ್ಘಾಟಿಸಿದರು. ಲೋಕಾಪುರದ ಶ್ರೀ ಮಹಾಂತ ಸ್ವಾಮೀಜಿ, ಉದ್ಯಮಿಗಳಾದ ರೇವಣಸಿದ್ದಯ್ಯ ಕಲ್ಬುರ್ಗಿ, ಚನ್ನಪ್ಪಗೌಡ ಪಾಟೀಲ್ ಶಿರವಾಳ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಉದ್ಯಮಿ ಬಸನಗೌಡ ತಂಗಡಗಿ ಇತರರಿದ್ದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಅದ್ಭುತವಾಗಿ ವೀರ ಚಂದ್ರಹಾಸ ಕಥಾನಕವನ್ನು ಪ್ರದರ್ಶನ ನೀಡಿದರು.