ಗದಗ: ಕರೊನಾ, ಅತಿವೃಷ್ಟಿಯಿಂದ ಜೀವನದಲ್ಲಿ ಕತ್ತಲು ಆವರಿಸಿದ ಸಂದರ್ಭದಲ್ಲಿ ಯಂಗ್ ಇಂಡಿಯಾ ಪರಿವಾರದ ವತಿಯಿಂದ ಸರ್ವ ಧರ್ವಿುಯ ಬಡಜನರಿಗೆ ಉಚಿತವಾಗಿ ದೀಪಾವಳಿಗೆ ಬೇಕಾಗುವ ಸಾಮಗ್ರಿಗಳ ಕಿಟ್ ನೀಡಿ ಗೌರವಿಸಿರುವುದು ಮಾದರಿಯಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಕಲ್ಲಯ್ಯಜ್ಜನವರು ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಯಂಗ್ ಇಂಡಿಯಾ ಪರಿವಾರದಿಂದ ಏರ್ಪಡಿಸಿದ್ದ ದೀಪಾವಳಿ ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತೋಂಟದಾರ್ಯ ಮಠದ ದೆಹಲಿ ಶಾಖಾಮಠದ ಮಹಾಂತ ದೇವರು ಮಾತನಾಡಿ, ಸೀರೆ, ದೀಪ ಬೆಳಗಲು ಹಣತೆ, ಲಕ್ಷಿ್ಮ ಪೂಜಾ ಸಾಮಗ್ರಿ ಜತೆಗೆ ಅಕ್ಕಿ, ಬೆಲ್ಲ, ಬೆಳೆ, ರವೆ ಹೀಗೆ ಹತ್ತಾರು ಬಗೆಯ ಆಹಾರ ಧಾನ್ಯಗಳನ್ನೊಳಗೊಂಡ ದಿನಸಿ ಕಿಟ್ಗಳನ್ನು ಸಾವಿರಕ್ಕೂ ಅಧಿಕ ಜನರಿಗೆ ವಿತರಿಸಿರುವುದು ಶ್ಲಾಘನೀಯ ಎಂದರು.
ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಸಮಾಜ ನಮಗೇನು ಮಾಡಿತು ಅನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದೆವು ಎಂಬುದು ಮುಖ್ಯ ಎಂದರು.
ಮುಂಬರುವ ದಿನಗಳಲ್ಲಿ ದೀಪದ ಬೆಳಕಿನಿಂದ ಕರೊನಾ ಕರಿಛಾಯೆ ಕರಗಿ ಎಲ್ಲರ ಬಾಳಲ್ಲಿ ಹೊಸಬೆಳಕು ಬರಲಿ. ಕಷ್ಟದಲ್ಲಿ ಬಡಜನರ ಕೈ ಹಿಡಿಯುವ ಮೂಲಕ ಶ್ರೀಮಂತ, ಬಡವ ಎಂಬ ಭೇದಭಾವ ಮರೆತು ಎಲ್ಲರೂ ಸರಿಸಮಾನವಾಗಿ ಹಬ್ಬ ಆಚರಿಸಬೇಕು ಎಂದರು.
ಕಾರ್ವಿುಕರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ವಿುಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.
ಬೆಟಗೇರಿ ಉರ್ಥ ಮೆಮೋರಿಯಲ್ ಚರ್ಚ್ನ ಫಾಸ್ಟರ್ ಡಾ.ಎಲ್.ಆರ್. ತಟಪಟಿ, ಗದಗ ಜಮಾತೆ ಉಲ್ಮಾ ಎ ಹಿಂದ್ನ ಮೌಲಾನಾ ಇನಾಯಿತುಲ್ಲಾ ಪೀರಜಾದೆ, ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟಿ, ಪರಶುರಾಮ ಕಟ್ಟಿಮನಿ, ಸಾಧಿಕ್ ನರಗುಂದ, ಎಸ್.ಎನ್. ಬಳ್ಳಾರಿ ಮಾತನಾಡಿದರು.
ಅಂಬರೀಷ ಅಂಗಡಿ, ಮಹೇಶ ಮುಟಗಾರ, ಮಂಜು ಬೂದಿಹಾಳ, ಸುಭಾನಸಾಬ ಸಂಶಿ, ಕಿರಣ ಪಾಟೀಲ, ಭರಮರಡ್ಡಿ ಮಂದಾರ, ಆನಂದ ಕೊರ್ಲಹಳ್ಳಿ, ವೀರಯ್ಯ ಹಿರೇಮಠ, ಹನುಮಂತ ಕೊಳಗನವರ, ಅಕ್ಬರ್ ಲಕ್ಷೆ್ಮೕಶ್ವರ, ಲಾಲಸಾಬ ಬಗಲಿ, ವೀರಣ್ಣ ಮಲ್ಲಾಪೂರ, ಚಂದ್ರು ರಗಳಿ, ವಿದ್ಯಾ ಖಟವಟೆ, ಮೇರಿ ಮುಷ್ಟಿಗೇರಿ, ಸುಮಂಗಲಾ ಹಿರೇಮಠ, ಚಂದ್ರಗೌಡ ಸಂಕನಗೌಡ್ರ ಮತ್ತಿತರರಿದ್ದರು. ಪ್ರಕಾಶ ನಿಡಗುಂದಿ ಸ್ವಾಗತಿಸಿದರು. ಸದಾನಂದ ಶಾಸ್ತ್ರಿ ಹರ್ಲಾಪೂರ ನಿರೂಪಿಸಿದರು. ಪ್ರಿಯಾ ಬಳ್ಳಾರಿ ವಂದಿಸಿದರು.