ನಾಪೋಕ್ಲು: ಉತ್ತಮ ಪರಿಸರದಲ್ಲಿ ಸರಳತೆ ಹಾಗೂ ಮೌಲ್ಯಯುತ ಶಿಕ್ಷಣ ದೊರೆಯುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಗುರಿ ಸಾಧಿಸಬಹುದು ಎಂದು ವಿರಾಜಪೇಟೆಯ ಡಾ.ರೇಖಾ ಚಿಣ್ಣಪ್ಪ ಹೇಳಿದರು.
ಇಲ್ಲಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಇರಿಸಿಕೊಳ್ಳಬೇಕು, ಉತ್ತಮ ಗುಣ, ನಡತೆಗಳನ್ನು ರೂಢಿಸಿಕೊಂಡರೆ ಯಶಸ್ಸು ಗಳಿಸಬಹುದು. ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವಿದ್ದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಮೌಲ್ಯಾಧಾರಿತ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಗುರಿಯಾಗಿರಬೇಕು ಎಂದರು.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಬೊಪ್ಪಂಡ ಎಂ.ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಮಕ್ಕಿ ಸುಬ್ರಹ್ಮಣ್ಯ ಬೊಪ್ಪಂಡ ಕುಶಾಲಪ್ಪ, ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಮುತ್ತಣ್ಣ, ಬಿದ್ದಾಟಂಡ ಪಾಪ ಮುದ್ದಯ್ಯ ಪ್ರೊ.ಕಲ್ಯಾಟಂಡ ಪೂಣಚ್ಚ, ಕೊಂಬಂಡ ಗಣೇಶ್, ನೆರವಂಡ ಸುನಿಲ್, ಬೊಳ್ಳಚೆಟ್ಟಿರ ಸುರೇಶ್, ನಾಯಕಂಡ ದೀಪು ಚಂಗಪ್ಪ, ಪ್ರಾಂಶುಪಾಲರಾದ ಶಾರದಾ ಅಪ್ಪಣ್ಣ ಇತರರು ಇದ್ದರು.
ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ, ಸನ್ಮಾನಿಸಲಾಯಿತು.