ಜಿಲ್ಲೆ

ಮೌಲ್ಯಯುತ ಕಲಿಕೆ ಅವಶ್ಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ದೇಶದಲ್ಲಿ ಹಲವು ಶಿಣ ಸಂಸ್ಥೆ ಹುಟ್ಟಿದ್ದು, ಮಕ್ಕಳಿಗೆ ಗುಣಮಟ್ಟದ ಶಿಣ ನೀಡುವುದು ಅವಶ್ಯ. ಎಲ್ಲೆಡೆ ಮೌಲ್ಯಗಳು ನಾಗರಿಕನಾಗಲು ಸಾಧ್ಯ. ಮನುಷ್ಯನಿಂದ ಮಾನವೀಯತೆ, ಧರ್ಮದಿಂದ ಧಯೆ ದೂರಾದಾಗ ಎರಡು ಅರ್ಥಹೀನವಾಗುತ್ತದೆ. ಮಾನವೀಯ ಮೌಲ್ಯಗಳ ಕಲಿಕೆ ಅವಶ್ಯ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್​ ಹೇಳಿದರು.

ನಗರದ ಸರ್ವಜ್ಞ ಮತ್ತು ಜಸ್ಟಿಸ್​ ಶಿವರಾಜ ಪಾಟೀಲ್​ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸರ್ವಜ್ಞ ಚಿಣ್ಣರ ಲೋಕದಲ್ಲಿ ಶನಿವಾರ ಏರ್ಪಡಿಸಿದ್ದ "ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರೊಂದಿಗೆ ಸಂವಾದ'ವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವವರು ಶಿಕರು. ಸಸಿಗೆ ನೀರೆರೆದು ಪೋಷಿಸಿದರೆ ಉತ್ತಮ ಲ ದೊರೆಯುವಂತೆ ಮಕ್ಕಳ ಭವಿಷ್ಯಕ್ಕೆ ಪ್ರೇರಣೆ ನೀಡಿದರೆ ಆಸ್ತಿಯಾಗುತ್ತಾರೆ ಎಂದರು.

ಶಿಕರು ಓದಿ ಜ್ಞಾನ ಪಡೆದು ನಿರಂತರವಾಗಿ ಕಲಿಯಬೇಕು. ಮಕ್ಕಳ ಮನಸು ಅರಿತು ಬೋಧಿಸಬೇಕು. ಮಾತೃ ಹೃದಯವಿರಬೇಕು. ಭವಿಷ್ಯದ ಕಾಳಜಿ ಇರಬೇಕು. ಸಕಾಲಿಕ ಮಾರ್ಗದರ್ಶನ ವಿದ್ಯಾರ್ಥಿಯ ದಿಕ್ಕು ಬದಲಾಯಿಸುವ ಶಕ್ತಿ ಇದೆ ಎಂದರು.

ಶಿಕ್ಷಕ ಎಂದರೆ ಪದವಲ್ಲ ದೊಡ್ಡ ಶಕ್ತಿ. ಪ್ರೀತಿಯಿಂದ, ಒಳ್ಳೆಯ ಮನಸ್ಸಿನಿಂದ ಪಾಠ ಮಾಡಿದ ಗುರು, ಶಿಷ್ಯನ ಮನದಲ್ಲಿ ಸದಾ ಇರುವನು. ಸತ್ಯ, ಶಾಂತಿ, ಒಳ್ಳೆಯ ಗುಣ, ಪ್ರೀತಿ, ವಿಶ್ವಾಸ, ದಯೆ ಅನುಕಂಪ ಹಾಗೂ ಮಾನವೀಯ ಮೌಲ್ಯಗಳನ್ನು ಮಕ್ಕಳ ಮೇಲೆ ಬಿಂಬಿಸಿದಾಗ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಚಿಂತಕ ರಂಜಾನ್​ ದರ್ಗಾ, ಸಿಎ ಆರ್​.ಪಿ.ಬಿಜಾಸಪುರ, ಪ್ರಶಾಂತ ಬಿಜಾಸಪುರ, ಸಂಸ್ಥೆ ಸಂಸ್ಥಾಪಕ ಚನ್ನಾರಡ್ಡಿ ಪಾಟೀಲ್​, ಸಂಸ್ಥೆ ಅಧ್ಯೆ ಗೀತಾ ಚನ್ನಾರಡ್ಡಿ ಪಾಟೀಲ್​, ಶೈಣಿಕ ನಿರ್ದೇಶಕ ಅಭಿಷೇಕ ಚನ್ನಾರಡ್ಡಿ ಪಾಟೀಲ್​, ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ವಿಜಯ ನಾಲವಾರ, ವಿರುಪನಗೌಡ ಪಾಟೀಲ್​, ಕರುಣೇಶ ಹಿರೇಮಠ, ಡಾ.ಪ್ರಸಾದ ಬಿಜಾಸಪುರ, ಗುರುರಾಜ ಕುಲಕರ್ಣಿ ಇತರರಿದ್ದರು. ಪ್ರಿಯಾ ಗಂಗೋತ್ರಿ ಪ್ರಾರ್ಥಿಸಿದರು, ಪ್ರೋ.ಚನ್ನಾರಡ್ಡಿ ಪಾಟೀಲ್​ ಸ್ವಾಗತಿಸಿದರು. ವಿಜಯ ನಾಲವಾರ ವಂದಿಸಿದರು. ಡಾ.ವಿದ್ಯಾವತಿ ನಿರೂಪಣೆ ಮಾಡಿದರು.