ಬಾಗಲಕೋಟೆ ನಗರದ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಹೋಮ. 
ಜಿಲ್ಲೆ

ಮೌಲ್ಯ ಉಳಿದರೇ ಸಮಾಜ ಬೆಳೆಯುತ್ತೆ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಮನುಷ್ಯ ಮೌಲ್ಯಗಳನ್ನು ಉಳಿಸಿಕೊಂಡರೆ ಮಾನವ, ಸಮಾಜ ಉಳಿಯುತ್ತದೆ. ನೈತಿಕತೆ ಹೆಚ್ಚಿಸುವ ಕೆಲಸ ಜಾತ್ರೆಗಳಿಂದ ಆಗುತ್ತದೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ರೆಗಳಿಂದಾಗಿ ಜನರು ಒಂದೆಡೆ ಸೇರಿ ಪ್ರೀತಿ, ವಿಶ್ವಾಸ ಹಂಚಿಕೊಳ್ಳುವ ಕಾರ್ಯ ಆಗುತ್ತದೆ. ಹಿರಿಯರು,ತಾಯಿಗೆ ಗೌರವ ಕೊಡಬೇಕು ಎಂದು ಸಲಹೆ ಮಾಡಿದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಧಾರ್ಮಿಕ ಕ್ಷೇತ್ರಕ್ಕೆ ಒತ್ತು ನೀಡುವ ದೇಶ ಭಾರತ. ಸಾಹಿತ್ಯ, ಸಂಗೀತ, ನಾಟಕ ಸೇರಿದಂತೆ ವೈವಿದ್ಯಮಯ ಹೊಂದಿದ ದೇಶವಾಗಿದೆ. ಬದುಕು ಚೆನ್ನಾಗಿ ಇರಬೇಕು ಎಂದರೆ ತಪ್ಪು ದಾರಿಯಲ್ಲಿ ನಡೆಯಬಾರದು. ಎಷ್ಟು ಕಾಲ ಬದುಕಿದೆವು ಎನ್ನುವುದಕ್ಕಿಂತ ಜೀವನದಲ್ಲಿ ಹೇಗೆ ಬದುಕಿದೆವು ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಬಿಜೆಪಿ ಜಿ¯್ಲÁ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಜಾತ್ರೆ ಮೂಲಕ ಎಲ್ಲರೂ ಒಂದಾಗಲು ಅವಕಾಶ ದೊರೆತಿದೆ. ಬಾಲ್ಯದ ನೆನಪುಗಳು ಮರುಕಳಿಸಿವೆ ಎಂದರು.

ಬಿಡಿಸಿಸಿ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಜಾತ್ರೆ ಯಾವುದೇ ಜಾತಿಗೆ ಸೀಮಿತವಾದ ಆಚರಣೆಯಲ್ಲ ಎಂದು ಹೇಳಿದರು.

ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಬಾಗಲಕೋಟೆ ಅಭಿವೃದ್ಧಿಗೆ ಒಂದಾಗಿ ಕೆಲಸ ಮಾಡೋಣ ಎಂದರು

ದಿಗAಬರೇಶ್ವರ ಮಠದ ಬಸಪ್ಪಜ್ಜ, ಉತ್ಕಲಾ ಸರನಾಡಗೌಡ, ಉದ್ಯಮಿ ದಿನೇಶ ಬಾರ್ಶಿ, ಹೇಮಂತ ಬಾರ್ಶಿ, ಬಸವರಾಜ ಪರ್ವತಿಮಠ,ಅನ್ನಪೂರ್ಣ, ಗುಂಡುರಾವ ಶಿಂಧೆ, ಪತ್ರಕರ್ತ ಬಸವರಾಜ ಹವಾಲ್ದಾರ ಇದ್ದರು.