ಜಿಲ್ಲೆ

ಮೌಢ್ಯದಿಂದ ದೂರವಿರಲು ಶಿಕ್ಷಣ ಅಗತ್ಯ

ಚಿತ್ರದುರ್ಗ: ಗ್ರಾಮೀಣ ಜನರು ಕಂದಾಚಾರ, ಮೌಢ್ಯದಿಂದ ದೂರವಿರಲು ಶಿಕ್ಷಣ ಅಗತ್ಯ ಎಂದು ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಸಲಹೆ ನೀಡಿದರು.

ಬಸವನಶಿವನಕೆರೆ ಗ್ರಾಮದಲ್ಲಿ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಧರ್ಮ, ನೀತಿ, ತತ್ವಜ್ಞಾನ ಮಾನವರಲ್ಲಿ ಸಂಸ್ಕಾರ ನೀಡಿ ಮಾನವೀಯ ಮೌಲ್ಯ ಬಿತ್ತಲಿವೆ. ಪಾಪಕ್ಕೆ ಪರಿಹಾರವಿದೆ ಎಂದಾದರೆ, ಅದನ್ನು ಮಾಡಲು ಜನರು ಹಿಂಜರಿಯುವುದಿಲ್ಲ. ಆದರೆ, ಕೆಲ ಜ್ಯೋತಿಷಿಗಳು ಪರಿಹರಿಸುವುದಾಗಿ ನಂಬಿಸಿ, ಧರ್ಮದ ಹೆಸರಿನಲ್ಲಿ ವಂಚಿಸುತ್ತಿದ್ದಾರೆ ಎಂದು ಬೇಸರಿಸಿದರು.

ಸಿದ್ಧರಾಮೇಶ್ವರರ ವಚನಗಳಲ್ಲಿ ಜೀವಪರ, ಮೌಢ್ಯ ವಿರುದ್ಧದ ಚಿಂತನೆ ಕಾಣಬಹುದು. ಇದರ ಅಧ್ಯಯನದ ಮೂಲಕ ವೈಜ್ಞಾನಿಕವಾಗಿ ಪ್ರಜ್ಞಾವಂತರಾಗಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ಯಾರನ್ನೂ ನೋಯಿಸದೆ, ಹಿಂಸಿಸದೆ ಬದುಕಿದಾಗ ಮಾನವ ಜನ್ಮ ಸಾರ್ಥಕ ಎಂದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಡಿ.ತಿಮ್ಮಣ್ಣ, ಕಾರ್ಯದರ್ಶಿ ಎಚ್.ಲಕ್ಷ್ಮಣ್, ಬಸವನಶಿವನಕೆರೆ ಗ್ರಾಪಂ ಸದಸ್ಯರಾದ ಚಂದ್ರಪ್ಪ, ಆರ್.ದೇವೇಂದ್ರಪ್ಪ, ಕೆ.ಬಸವರಾಜಪ್ಪ ಬ್ಯಾಲಹಾಳ್, ಈಶ್ವರಪ್ಪ ಬೇಡರಶಿವನಕೆರೆ, ತಿಪ್ಪೇಸ್ವಾಮಿ, ಯಲ್ಲಪ್ಪ ಇತರರಿದ್ದರು.