ಬಾದಾಮಿ: ರೈತರು, ಕಾರ್ಮಿಕರು ಹಾಗೂ ಇತರ ವರ್ಗದ ಜನರು ದಿನನಿತ್ಯ ಮೋಸಕ್ಕೆ ಒಳಗಾಗುತ್ತಿದ್ದಾರೆ. ಗ್ರಾಹಕರು ಮೋಸ ಹೋಗದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ಪ್ರಾಂತ ಗ್ರಾಹಕ ಪಂಚಾಯತ್ ಸದಸ್ಯ, ನಿವೃತ್ತ ಪ್ರಾಚಾರ್ಯ ಎಸ್.ಎಚ್.ವಾಸನ ಹೇಳಿದರು.
ಇಲ್ಲಿನ ಕಾಲೇಜು ರಸ್ತೆಯ ನ್ಯಾಯವಾದಿ ಎಂ.ಎಸ್.ಹಿರೇಮಠ ಅವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಹಕ ಪಂಚಾಯತ್ ತಾಲೂಕು ಟಕದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರು ಆಗಿದ್ದಾರೆ. ಖರೀದಿಸುವಾಗ ಎಚ್ಚರ ವಹಿಸಬೇಕು ಎಂದರು.
ತಾಲೂಕು ಟಕದ ಅಧ್ಯ, ನ್ಯಾಯವಾದಿ ಎಂ.ಎಸ್.ಹಿರೇಮಠ, ಕಾರ್ಯದರ್ಶಿ ಆರ್.ಪಿ.ಹಿಂದಿನಮನಿ, ಪ್ರಚಾರ ಸಮಿತಿಯ ಪ್ರಮುಖ ಶಂಕರ ಲಮಾಣಿ, ಎಸ್.ಡಿ.ಜೋಗಿನ, ಭೀಮನಗೌಡ ಬಾಜನ್ನವರ, ಅರುಣ ಗೌಡರ, ಖಜಾಂಚಿ ಜೆ.ಜೆ.ಸುಂಕದ, ಆರ್.ಜಿ.ಕೊಣ್ಣೂರ ಇದ್ದರು.