ಜಿಲ್ಲೆ

ಮೋದಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡಿ

ಬಾಗಲಕೋಟೆ: ಅಧಿಕಾರಕ್ಕೆ ಬಂದರೆ ಮನೆ ಒಡತಿಗೆ ಮಾಸಿಕ ಎರಡು ಸಾವಿರ ರೂ.ಗಳ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ವಿತರಿಸುವ ವಿಚಾರವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ ಸುರ್ಜೇವಾಲಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೇವಡಿ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ತಲುಪಿಸಲು ಕಾರ್ಯಕರ್ತರಿಗೆ ಕಾರ್ಡ್ ನೀಡುವ ಕಾರ್ಯಕ್ರಮದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲದಿದ್ದರೆ ಹೇಗೆ ಎನ್ನುವ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಸುರ್ಜೆವಾಲಾ ಮನೆಯಲ್ಲಿ ತಾಯಿ, ಧರ್ಮಪತ್ನಿ, ಮಗಳು, ಸಹೋದರಿ ಇಲ್ಲ ಎನ್ನುವ ಕುಟುಂಬಗಳು ಲಕ್ಷಕ್ಕೆ ಒಂದೋ ಎರಡು ಇರುತ್ತವೆ. ಅಂತ ಮನೆಯಲ್ಲಿ ಮುಖ್ಯಸ್ಥನಿಗೆ ಕಾರ್ಡ್ ಕೊಟ್ಟು, ರಿಜಿಸ್ಟರ ಮಾಡಿಸಿ ಎಂದರು. ಮುಂದುವರೆದು ಇದಕ್ಕೆ ಪ್ರಧಾನಿ ಮೋದಿ ಅವರನ್ನು ಉದಾಹರಿಸಿ, ಅವರ ಮನೆಯಲ್ಲಿ ಮಹಿಳೆಯರು ಇಲ್ಲ. ಅವರಿಗೇನೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಎಂದು ಲೇವಡಿ ಮಾಡಿದರು. ಮನೆಯ ಯಜಮಾನನಿಗೆ ಕಾರ್ಡ್ ಕೊಡುವ ವಿಚಾರ ಪ್ರಸ್ತಾಪ ಮಾಡುತ್ತ ಪತ್ರಕರ್ತರು ಇದನ್ನು ಬರೆಯಬೇಡಿ ಎಂದೂ ಹೇಳಿದರು.