ಜಿಲ್ಲೆ

ಮೋದಿ ವಿರುದ್ಧ  ಅವಳನಕಾರಿಯಾಗಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಸಕಲೇಶಪುರ: ಪಾಕ್ ವಿದೇಶಾಂಗ ಸಚಿವ ಪ್ರಧಾನಿ  ಮೋದಿ ವಿರುದ್ಧ  ಅವಳನಕಾರಿಯಾಗಿ ಹೇಳಿಕೆ ಖಂಡಿಸಿ ಹಾಗೂ ಡಿ ಕೆ ಶಿವಕುಮಾರ್ ವರನ್ನು ಗಡಿಪಾರು ಮಾಡುವಂತೆ  ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಬಿಜೆಪಿ ಮಂಡಲದ ಕಾರ್ಯಕರ್ತರು ಬುಧವಾರ  ಪಾಕ್ ಸಚಿವ ಬಿಲಾವಲ್ ಬುಟ್ಟೊ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರವರು ಉಗ್ರ  ಭಯೋತ್ಪಾದಕರನ್ನು ಒಲೈಸುವ ಹೇಳಿಕೆಯನ್ನು ನಿಡುತಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಪವಿಭಾಗ ಅಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ ಮಾತನಾಡಿದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇತ್ತೀಚೆಗೆ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ರವರ ಹೇಳಿಕೆ ಖಂಡನೀಯ, ಅವರ ಹೇಳಿಕೆ ಇದೇ ರೀತಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ಪಕ್ಷ ಅವರ ವಿರುದ್ಧ ಉಗ್ರ ಹೋರಾಟ ನೆಡೆಸಲಾಗುವುದು ಎಂದರು ಉಗ್ರರ ಮತ್ತು ಭಯೋತ್ಪಾದಕರ ಜೊತೆ ನೆಂಟಸ್ಥಾನ ಮಾಡಲು ಹೋರಟು ಅವರ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್‌ರವರನ್ನು ನಮ್ಮ ದೇಶದಿಂದ ಗಡಿಪಾರು ಮಾಡಬೇಕು ಮತ್ತು ಇವರ ಮೇಲೆ ಎನ್.ಐ.ಎ. ನಿಂದ ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಅಗ್ರಹಿಸಿದರು.

ಸಿಮೆಂಟ್ ಮಂಜು ಮಾತನಾಡಿ, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೊ ವಿಶ್ವ ನಾಯಕರು ಆಗಿರುವ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೆಂದ್ರ ಮೊದಿಯವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರವರು ಸದಾ ಉಗ್ರವಾದವನ್ನು ಸಮರ್ಥ ನೆ ಮಾಡಿ ಕೊಳ್ಳತಿರುವುದನ್ನು ಗಮನಿಸಿದರೆ ಇವರು ಮನಸ್ಥಿತಿ ಸಮಜ ಅರ್ಥ ಮಾಡಿಕೊಳ್ಳುತಿದೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.