ಹಾಸನ: ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿರುವುದರಿಂದ ಗುರುವಾರ ನಗರದಲ್ಲಿ ಜಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೇಮಾವತಿ ಪ್ರತಿಮೆ ಎದುರು ಸಿಹಿ ಹಂಚಿ, ಪಟಾಕಿ ಸಿಡಿಸಿ ಪ್ರಧಾನಿ ನರೇಂದ್ರ ಮೋದಿ ಪರ ಜಯಘೋಷ ಮೊಳಗಿಸಿ ಬಿಜೆಪಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಪ್ರಧಾನಿ ಅವರ ಸಮರ್ಥ ನಾಯಕತ್ವ ಹಾಗೂ ವಿಶ್ವ ಮೆಚ್ಚುವ
ಕೆಲಸ ಮಾಡುತ್ತಿರುವುದರಿಂದ ಅವರ ತವರು ರಾಜ್ಯದ ಮತದಾರರು ಸತತ ಏಳು ಬಾರಿ ಬಿಜೆಗೆ ಅಧಿಕಾರ ನೀಡಿದ್ದಾರೆ. ಅದರಲ್ಲೂ ಈ ಬಾರಿ, ಗುಜರಾತ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದು ದಾಖಲೆ ನಿರ್ಮಿಸಿರುವುದು ಸಂತಸದ ವಿಷಯ ಎಂದರು.
ಹಿಮಾಚಲ ಪ್ರದೇಶದಲ್ಲಿ ಜಿಜೆಪಿ ಗಣನೀಯ ಸಾಧನೆಯನ್ನು ಮಾಡದ್ದು, ಸರ್ಕಾರ ರಚನೆಮಾಡುವ ಹಂತದಲ್ಲಿದ್ದೂ, ಫಲಿತಾಂಶ ಹೊರಬಂದ ನಂತರ ಹಿಮಾಚಲ ಪ್ರದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡುಯುವ ವಿಶ್ವಾಸವಿದೆ ಎಂದ ಅವರು ಗುಜರಾತಿನ ಫಲಿತಾಂಶ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಹಾಸನದಲ್ಲೂ ಬಿಜೆಪಿ ಗೆಲುವಿನ ವಾತಾವರಣವಿದ್ದು, ಶಾಸಕ ಪ್ರೀತಂಗೌಡರ ಅಭಿವೃದ್ಧಿ ಕಾರ್ಯಗಳು ಕಂಡ ಜನತೆ ಮುಂದಿನ ಬಾರಿಯೂ ಸಹ50 ಸಾವಿರ ಲೀಡ್‌ನಲ್ಲಿ ಗೆಲ್ಲುವ ಭರವಸೆಯಿದ್ದು ಕರ್ನಾಟಕದಲ್ಲಿ ಮೂಂಬರುವ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಗೆದ್ದು ಆಡಳಿತ ನಡೆಸಿ ಬಿಜೆಪಿ ಕಾರ್ಯಕರ್ತರು ಶ್ರಮಕ್ಕೆ ಉತ್ತಮ ಪ್ರತಿಫಲ ನೀಡಲಿದೆ ಎಂದರು.
ಕಾಂಗ್ರೆಸ್ ಜೋಡೊ ಯಾತ್ರೆಗೆ ಸಿದ್ಧರಾಗಿ:
ನಗರಸಭೆ ಅಧ್ಯಕ್ಷ ಆರ್. ಮೋಹನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಭಾರತ್ ಜೋಡೊ ಯಾತ್ರೆಯ ಗಾಳಿಯನ್ನು ಬೀಸಿದ್ದರು ಗುಜರಾತ್‌ನಲ್ಲಿ ಈ ಭಾರಿಯೂ ಕಮಲ ಅರಳಿದೆ. ಹಾಗೆಯೆ ಕರ್ನಾಟಕದಲ್ಲೂ ಶೀಘ್ರದಲ್ಲಿ ಬಿಜೆಪಿ ಮುಂಬರಲಿದ್ದು ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯನ್ನು ಬಿಟ್ಟು ಕಾಂಗ್ರೆಸ್ ಜೋಡೊಯಾತ್ರೆ ಮಾಡಬೇಕು ಎಂದು ಟೀಕಿಸಿದರು.
ಗ್ರಾಮಾಂತರ ಅಧ್ಯಕ್ಷ ರಂಗನಾಥ್, ನಗರಸಭೆ ಸದಸ್ಯರಾದ ಸಂತೋಷ, ಮಹೇಶ್, ಪ್ರೇಮ್ ಕುಮಾರ್ , ಮಾಜಿ ನಗರಾಧ್ಯಕ್ಷ ಶೋಭನ್ ಬಾಬು, ಮಹಿಳಾ ಮುಖಂಡರಾದ ಅನ್ನಪೂರ್ಣ ಇತರರು ಇದ್ದರು.