ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಕುಟುಂಬದವರು ಬುಧವಾರ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಹೀರಾಬೆನ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿಯುತ್ತಿದ್ದಂತೆಯೇ ಚಾಮುಂಡಿಬೆಟ್ಟಕ್ಕೆ ತೆರಳಿದ ಪ್ರಹ್ಲಾದ್ ಮೋದಿ ಅವರ ಮಗಳು ಮತ್ತು ಅಳಿಯ ವಿಶೇಷ ಪೂಜೆ ಸಲ್ಲಿಸಿದರು. ಪ್ರಹ್ಲಾದ್ ಮೋದಿ ಕುಟುಂಬ ಮೈಸೂರು ಪ್ರವಾಸಕ್ಕೆ ಮಂಗಳವಾರ ಆಗಮಿಸಿದ ಸಂದರ್ಭ ಕಾರು ಅಪಘಾತಕ್ಕೆ ಒಳಗಾಗಿ ಕುಟುಂಬ ಸದಸ್ಯರು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.