ಜಿಲ್ಲೆ

ಮೋದಿ ಅವರು ಚುನಾವಣೆ ಪ್ರಧಾನಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೆಲ್ಲಿ ಚುನಾವಣೆ ಇರುತ್ತದೆ ಅಲ್ಲೆಲ್ಲಾ ಹೋಗುತ್ತಾರೆ. ಈ ಬಜೆಟ್ ನಲ್ಲಿ ಚುನಾವಣೆ ಎಲ್ಲೆಲ್ಲಿ ಇದೆಯೋ ಅಲ್ಲಿಗೆ ಹೆಚ್ಚು ಕೊಟ್ಟಿದ್ದಾರೆ. ಹೀಗಾಗಿ ಮೋದಿ ಸಾಹೇಬ್ರು ಚುನಾವಣೆ ಪ್ರಧಾನಿಯೇ ಹೊರತು, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಇರುವ ಪ್ರಧಾನಮಂತ್ರಿ ಅಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿಗಳು ಸಣ್ಣಪುಟ್ಟ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ದಣಿವಿದ್ದಾರೆ ಎಂದು ಸೋನಿಯಾ ಗಾಂಽ ಹೇಳಿದರೆ ಆ ಬಗ್ಗೆ ಮೋದಿ ಅವರು ಮಾತನಾಡುತ್ತಾರೆ. ಗಣೇಶ ಮೂರ್ತಿಯನ್ನು ಎತ್ತಿಕೊಂಡು ಹೋದರು ಎನ್ನುವ ಬಗ್ಗೆ ಹೇಳುತ್ತಾರೆ. ಅವರು ಚೀಪ್ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ವಿನಃ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ ಎಂದು ಕಿಡಿಕಾರಿದರು.

ಇವತ್ತು ದೇಶವನ್ನು ಆರ್ಥಿಕವಾಗಿ ದಿವಾಳಿಯತ್ತ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಕೊಂಡೊಯ್ಯುತ್ತಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಬಡವ ಮತ್ತು ಮಧ್ಯಮ ವರ್ಗದವರನ್ನು ಆರ್ಥಿಕ ಮಟ್ಟವನ್ನು ಎತ್ತರಿಸಿದ್ದೇವೆ. ಈ ರೀತಿ ಕೇಂದ್ರ ಸರ್ಕಾರ ಮಾಡುತ್ತಿದೆಯಾ? ನಿರ್ಮಲಾ ಸೀತಾರಾಮನ್ ಅವರು ಹೀಗೆ ಮಾಡಿದ್ದಾರಾ? ಅಭಿವೃದ್ಧಿಗೆ ಹಣ ಒದಗಿಸಲ್ಲ ಎಂದರೆ ಅದು ದೇಶವನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿತ್ತ ಸಾಗಿಸುತ್ತಿದೆ ವಿನಃ ಅದು ರಾಜ್ಯ ಸರ್ಕಾರವಲ್ಲ ಎಂದರು.

ಬಡ ಮತ್ತು ಮಧ್ಯವರ್ಗದ ಜನರಿಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮ ಕೊಡುತ್ತಿಲ್ಲ. ಬರೀ ಹಿಂದು ಧರ್ಮ, ಮುಸ್ಲಿಂ ಧರ್ಮ ಇರತೆ ಯಾವುದೇ ಸಣ್ಣಪುಟ್ಟ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಈ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳು ಉತ್ತೇಜನ, ಬಡವರು, ರೈತರಗೆ ಉತ್ತೇಜಿಸುವ ಯಾವುದೇ ಕಾರ್ಯಕ್ರಮ ಇಲ್ಲ. ಒಟ್ಟಾರೆಯಾಗಿ ಈ ಬಜೆಟ್ ಆರ್ಥಿಕವಾಗಿ ದೇಶ ದಿವಾಳಿಯತ್ತ ಸಾಗಿದೆ ಎಂದು ಗೊತ್ತಾಗುತ್ತದೆ. ಬಿಜೆಪಿಯವರಿಗೆ ಚುನಾವಣೆಗಾಗಿ ಹಿಂದು ಧರ್ಮ ಬೇಕಿದೆ ವಿನಃ ಮತ್ತೇನು ಬೇಕಾಗಿಲ್ಲ. ಚುನಾವಣೆಗೆ ಹಿಂದು ಧರ್ಮ ಹಿಂದು ಧರ್ಮ. ಚುನಾವಣೆ ಮುಗಿದ ಬಳಿಕ ಮುಂದು ಧರ್ಮ ಎಂದು ಬಿಜೆಪಿಯವರ ಬಾಯಲ್ಲಿ ಬರುತ್ತದೆ ಎಂದು ಛೇಡಿಸಿದರು.