ಜಿಲ್ಲೆ

ಆದಾಯದ ಬದಲು ರೈತರ ಖರ್ಚು ದುಪ್ಪಟ್ಟುಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಕೋಲಾರ

ರಾಜ್ಯಕ್ಕೆ ನೂರು ಬಾರಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವ ಮೂಲಕ ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಜಾಲಪ್ಪ ಆಸ್ಪತ್ರೆ ಮುಂಭಾಗದ ಅತಿಥಿ ಗೃಹ ಸಮೀಪ ಸೋಮವಾರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದರು. ಕೋಲಾರ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆಗೆ ನಿರೀಕ್ಷೆ ಮೀರಿ ಜನಸ್ಪಂದನೆ ದೊರೆತಿದೆ. ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ, ಲಂಚ ನೀಡದೆ ಕೆಲಸ ಆಗುತ್ತಿಲ್ಲ ಎಂದು ಜನ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದರು.


ಲಂಚದ ಆರೋಪ ಸಾಬೀತುಪಡಿಸಿದರೆ ನಿವೃತ್ತಿ: ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಅತ್ಯಂತ ಭ್ರಷ್ಟ ಸರ್ಕಾರವನ್ನು ನೋಡಿಯೇ ಇಲ್ಲ. ಶೇ.40 ಪಸೆರ್ಂಟ್ ಕಮಿಷನ್ ಬಗ್ಗೆ ಮೂರು ಬಾರಿ ಸದನದಲ್ಲಿ ಚರ್ಚೆಗೆ ಕೋರಿದರೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಲಿಲ್ಲ. ವಿಧಾನ ಸೌಧದ ಗೋಡೆ ಗೋಡೆಯೂ ಲಂಚಕ್ಕಾಗಿ ಪಿಸುಗುಡುತ್ತಿವೆ. ಜಿಲ್ಲಾ, ಉಪವಿಭಾಗ, ನೋಂದಣಿ, ಸರ್ವೇ, ತಾಲೂಕು ಕಚೇರಿ, ಪೊಲೀಸ್ ಠಾಣೆಗಳು ಭ್ರಷ್ಟಾಚಾಎದ ಕೂಪಗಳಾಗಿವೆ. ಹೋಟೆಲ್ ತಿಂಡಿಗಳ ಮಾದರಿಯಲ್ಲಿ ಪ್ರತಿ ಕೆಲಸಕ್ಕೂ ಲಂಚ ನಿಗದಿಪಡಿಸಲಾಗಿದೆ ಎಂದು ದೂರಿದ ಅವರು, ‘ನಮ್ಮ ಅಧಿಕಾರವಧಿಯ ಲಂಚದ ಆರೋಪ ಸಾಬೀತುಮಾಡಿದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು.


ಭ್ರಷ್ಟಾಚಾರ ವ್ಯಾಪಕ: ಯಾವುದೇ ನೇಮಕಾತಿಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದರಿಂದಾಗಿ ಐಎಎಸ್, ಐಪಿಎಸ್ ಅಧಿಕಾರಿಗಳು ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿ ಜೈಲು ಸೇರುವಂತಾಗಿದೆ. ರೈತರ ಜಮೀನಿನ ಪಿ. ನಂಬರ್ ತೆಗೆಯಲು 40 ಸಾವಿರ ರೂ., ಕಾಮಗಾರಿಗೆ ಎನ್‌ಐಸಿ ನೀಡಲು ಹಣ ಕೇಳುತ್ತಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಎನ್‌ಐಸಿಗೆ ಒಂದೇ ಒಂದು ನಯಾ ಪೈಸೆ ಕೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.


ರೈತರ ಖರ್ಚು ದ್ವಿಗುಣ: ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಮೋದಿ, ರೈತರ ವ್ಯವಸಾಯಕ್ಕಾಗಿ ಖರ್ಚು ಮಾಡಬೇಕಾದ ಹಣವನ್ನು ದುಪ್ಪಟ್ಟು ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡದೆ ಉದ್ಯಮಿಗಳ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ 78 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 27 ಲಕ್ಷ ರೈತರ 8,150 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೆ ಎಂದರು.


ಅಧಿಕಾರಕ್ಕೆ ಬಂದರೆ ವರ್ಷದೊಳಗೆ ಎತ್ತಿನಹೊಳೆ: 2 ವರ್ಷ 10 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಗೆ ರೈತರು ನೆನಪು ಬರಲಿಲ್ಲವಾ? ಈಗ ಪಂಚರತ್ನ ಯಾತ್ರೆ ಎಂದು ಓಡಾಡುತ್ತಿದ್ದಾರೆ. ಜೆಡಿಎಸ್‌ನವರು ಸಮಯ ಸಾಧಕರು. ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬರುತ್ತವೆ ಎಂದು ಕ್ಕ ಹಾಕಿ ಹೆಚ್ಚು ಸ್ಥಾನ ಬಂದ ಕಡೆ ಸೇರಿಕೊಳ್ಳುತ್ತಾರೆ. ಕೋಲಾರದಲ್ಲಿ ಕೆಸಿ ವ್ಯಾಲಿ ನೀರಿಗಾಗಿ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಬಂದು ಮನವಿ ಮಾಡಿದ ಮೇರೆಗೆ 1,400 ಕೋಟಿ ರೂಪಾಯಿ ಅನುದಾನ ನೀಡಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದ್ದೆ. ಎತ್ತಿನಹೊಳೆಗೂ ವಿರೋಧ ಮಾಡಿದವರು ಕುಮಾರಸ್ವಾಮಿಯೇ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೆ ವರ್ಷದೊಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯ ಉಸ್ತುವಾರಿ ರಣ್‌ದೀಪ್ ಸುರ್ಜೇವಾಲ, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಪಾಟೀಲ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಶಾಸಕರಾದ ರಮೇಶ್‌ಕುಮಾರ್, ಶ್ರೀನಿವಾಸಗೌಡ, ಎಂ. ರೂಪಕಲಾ, ನಾಗೇಶ್, ಎಂ.ಎಲ್.ಸಿ. ನಜೀರ್ ಅಹ್ಮದ್, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಕೆಪಿಸಿಸಿ ಕೋಲಾರ ಉಸ್ತುವಾರಿ ಎಂ.ಆರ್. ಸೀತಾರಾಮ್, ನಾರಾಯಣಸ್ವಾಮಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಜಿಲ್ಲಾಧ್ಯಕ್ಷೆ ರತ್ನಮ್ಮ ಇದ್ದರು.

ಯಾತ್ರೆಯಿಂದ ಜನರ ಕಷ್ಟ ಕೇಳುವ ಅವಕಾಶ: ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಈ ಹಿಂದೆ ಎಸ್.ಎಂ.ಕೃಷ್ಣ ಅವಧಿಯಲ್ಲಿ ಪಾಂಚಜನ್ಯ ಯಾತ್ರೆ ಕೈಗೊಂಡು ಕಾಂಗ್ರೆಸ್ ಅಧಿಕಾರಕ್ಕೆ ತರಲಾಯಿತು. ಈಗ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಮೂಲಕ ಜನರ ಕಷ್ಟ ಸುಖ ಆಲಿಸಲಾಗುತ್ತಿದೆ. 2023ಕ್ಕೆ ರಾಜ್ಯದಲ್ಲಿ, 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಬೇಕಿದೆ ಎಂದರು.

ಅಶಿಸ್ತಿನ ವಿರುದ್ಧ ಡಿಕೆಶಿ ಗರಂ: ವೇದಿಕೆಯಲ್ಲಿ ಕೆಲ ಮುಖಂಡರು ಗುಸು ಗುಸು ಚರ್ಚೆ ಹಾಗೂ ಅತ್ತಿತ್ತ ಓಡಾಡುತ್ತಿದ್ದವರನ್ನು ಕಂಡು ಡಿ.ಕೆ. ಶಿವಕುಮಾರ್ ಗರಂ ಆದರು. ಪಕ್ಷದಲ್ಲಿ ಶಿಸ್ತು ಕಾಪಾಡಬೆಕು, ವೇದಿಕೆ ಮುಂಭಾಗ ಕುಳಿತಿರುವವರು ಶಿಸ್ತಿನಿಂದ ಇದ್ದಾರೆ. ವೇದಿಕೆ ಮೇಲಿರುವವರು ಶಿಸ್ತು ಪಾಲಿಸಬೇಕು ಎಂದು ಎಚ್ಚರಿಸಿದರು.


ಜಿಲ್ಲೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಲೂರಿನ ಲಕ್ಷ್ಮೀನಾರಾಯಣ ಹಾಗೂ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಊರುಬಾಗಿಲು ಶ್ರೀನಿವಾಸ್ ಅವರಿಗೆ ಡಿ.ಕೆ.ಶಿವಕುಮಾರ್ ಪಕ್ಷದ ಧ್ವಜ ನೀಡಿ, ಶುಭ ಹಾರೈಸಿದರು.

ಜನರ ಸಮಸ್ಯೆಗೆ ಸ್ಪಂದಿಸದ ಡಬಲ್ ಇಂಜಿನ್ ಸರ್ಕಾರ

ಕೋಲಾರ: ಕೇಂದ್ರದಲ್ಲಿ ಬಿಜೆಪಿಯ ಬಲಿಷ್ಠ ಸರ್ಕಾರ, ರಾಜ್ಯದಲ್ಲಿ ಆಪರೇಷನ್ ಲೋಟಸ್ ಸರ್ಕಾರವಿದೆ. ಆದರೆ ಈ ಡಬಲ್ ಇಂಜಿನ್ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಅವರು ನೀಡಿದ್ದ 600 ಭರವಸೆಗಳಲ್ಲಿ 50 ಸಹ ಈಡೇರಿಲ್ಲ. ಬೆಲೆ ಏರಿಕೆ, ಭ್ರಷ್ಟಾಚಾರದ ಜತೆಗೆ ಸಾಲದ ಹೊರೆಯನ್ನು ಜನರ ತಲೆಗೆ ಏರಿಸಿರುವುದೇ ಇವರ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ವಾಗ್ಧಾಳಿ ನಡೆಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊವ್ಮಾಯಿಗೆ ಸಾವಾಜಿಕ ಜಾಲತಾಣದಲ್ಲಿ ನಿತ್ಯ ಪ್ರಶ್ನೆ ವಾಡುತ್ತಿದ್ದೇವೆ, ಒಂದಕ್ಕೂ ಉತ್ತರ ಸಿಕ್ಕಿಲ್ಲ. ಕೆ.ಆರ್.ರಮೇಶ್‌ಕುವಾರ್ ರೂಪಿಸಿದ್ದ ಪ್ರಣಾಳಿಕೆಯಲ್ಲಿನ 169 ಭರವಸೆಯಲ್ಲಿ 165ನ್ನು ಕಾಂಗ್ರೆಸ್ ಸರ್ಕಾರವಿದ್ದಾಗ ಈಡೇರಿಸಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದರೆ ಮನೆ ಒಡತಿಗೆ ವಾಸಿಕ 2 ಸಾವಿರ ರೂ., 2 ನೂರು ಯುನಿಟ್ ಉಚಿತ ವಿದ್ಯುತ್ ಸೇರಿ ಹಲವು ಭರವಸೆಗಳನ್ನು ಈಡೇರಿಸುವುದಾಗಿ ವಾಗ್ಧಾನ ವಾಡುತ್ತೇವೆ. ಇದರ ಗ್ಯಾರಂಟಿ ಕಾರ್ಡ್‌ನ್ನು 27ರ ನಂತರ ಪ್ರತಿ ಮನೆಗೆ ತಲುಪಿಸುತ್ತೇವೆ. ಇದರ ಜತೆಗೆ ಡಬಲ್ ಇಂಜಿನ್ ಸರ್ಕಾರದ ಪಾಪದ ಪುರಾಣ ಬಿಚ್ಚಿಡುವ ಕರಪತ್ರ ವಿರಿಸಲಾಗುವುದು ಎಂದರು.


3 ಲಕ್ಷ ಕೋಟಿ ರೂ. ಸಾಲ: ಕರೊನಾ ಪರಿಹಾರವಾಗಿ 20 ಲಕ್ಷ ಕೋಟಿ ರೂ. ಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 19 ಸಾವಿರ ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ೋಷಿಸಿದ್ದರು. ಆದರೆ ಯಾರಿಗಾದರೂ 500 ರೂ. ಸಿಕ್ಕಿತೇ? ರಾಜ್ಯ ಸರ್ಕಾರ 3 ಲಕ್ಷ ಕೋಟಿ ರೂ. ಸಾಲ ವಾಡಿದೆ. ಆದರೆ ಸಾಲದ ಹಣ ಶೇ.40 ಕಮಿಷನ್‌ಗೆ ಹೋಗಿದೆ ಎಂದು ಡಿಕೆಶಿ ಆರೋಪಿಸಿದರು.


ಗೋವಿಂದಗೌಡರಿಗೆ ಮೆಚ್ಚುಗೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜಿಲ್ಲೆಯ 6 ಶಾಸಕರ ಗೆಲುವಿಗೆ ಶ್ರಮಿಸಿದ್ದಾರೆ. ನಾ ನಾಯಕಿ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸಂಟಿಸಿದ್ದಾರೆ. ಹೀಗಾಗಿ ಅವರು ಅಭಿನಂದನಾರ್ಹರು ಎಂದು ಡಿ.ಕೆ.ಶಿವಕುವಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಕಷ್ಣಬೈರೇಗೌಡ ಸಚಿವರಾಗಿದ್ದಾಗ ಜಿಲ್ಲೆಗೆ 1ಲಕ್ಷ ಕಷಿ ಹೊಂಡ ಒದಗಿಸಿ ನಿಮ್ಮ ಬದುಕು ಹಸನಾಗಿಸಿದ್ದಾರೆ. ಜಿಲ್ಲೆಯ ಆರೂ ಕಾಂಗ್ರೆಸ್ ಶಾಸಕರು ಮತ್ತೆ ವಿಧಾನಸೌಧದ 3ನೇ ಮಹಡಿಗೆ ಬರಬೇಕು ಎಂದರು.


ಕೋಲಾರ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಾರೆ. ನೂತನ ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಮತ್ತು ಕೆಲವು ತಾಲೂಕು ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಈಗ ಇದ್ದವರಿಗೆ ಬೇರೆ ಹುದ್ದೆಗಳ ವ್ಯವಸ್ಥೆ ಕಲ್ಪಿಸಲಾಗುವುದು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ


ಆಪರೇಷನ್ ಕಮಲದ ಮೂಲಕ ಅನೈತಿಕ ವಾರ್ಗದಲ್ಲಿ ಅಧಿಕಾರ ಹಿಡಿದು ಜನರ ಹೊಟ್ಟೆಮೇಲೆ ಹೊಡೆಯುವ ಕೆಲಸ ವಾಡಲಾಗುತ್ತಿದೆ. ಈ ಸರ್ಕಾರದಲ್ಲಿ ಯಾವುದೇ ಯೋಜನೆ ಇಲ್ಲ, ಜಿಎಸ್ಟಿ ಮೂಲಕ ಬಡವರ ಮೇಲೆ ಬರೆ ಎಳೆಯಲಾಗಿದೆ. ನಿರಾಶ್ರಿತರಿಗೆ ಮನೆ ಕೊಟ್ಟಿಲ್ಲ, ಪ್ರಕೃತಿ ವಿಕೋಪದಲ್ಲಿ ನಷ್ಟಗೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಎನ್.ಎಸ್.ನಾರಾಯಣಸ್ವಾಮಿ ಶಾಸಕ, ಬಂಗಾರಪೇಟೆ

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಎಲ್ಲರೂ ಒಗ್ಗೂಡಿ ಕೆಲಸ ವಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕಿದೆ.
ಕೆ.ವೈ.ನಂಜೇಗೌಡ ಶಾಸಕರು ಮಾಲೂರು

ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಮಾವೇಶಕ್ಕೆ 12ಗಂಟೆಯಾದರೂ ಯಾವ ನಾಯಕರೂ ಆಗಮಿಸಿರಲಿಲ್ಲ. ಮಧ್ಯಾಹ್ನ 1.30ಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ನಾಯಕರಿದ್ದ ಪ್ರಜಾಧ್ವನಿ ಯಾತ್ರೆಯ ಬಸ್ ಆಗಮಿಸಿದಾಗ ಕಾರ್ಯಕರ್ತರು, ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ವೇದಿಕೆಯಲ್ಲಿ ಗದ್ದಲ ಹೆಚ್ಚಾಗಿ ಸ್ಥಳೀಯ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದವು. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಳಿ ಸೆಲ್ಪಿಗೆ ಜನ ಮುಗಿಬಿದ್ದರು.
ಜಾನಪದ ಅಕಾಡಮಿ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್ ಮತ್ತು ಗೊಲ್ಲಹಳ್ಳಿ ಶಿವಪ್ರಸಾದ್ ಸಂಗಡಿಗರಿಂದ ಜಾನಪದ ಗೀತೆ ಗಾಯನ ನಡೆಯಿತು.