ಜಿಲ್ಲೆ

ಮೋತಕಪಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿ; ಕರವೇ ಒತ್ತಾಯ

ಸೇಡಂ: ಐತಿಹಾಸಿಕ ತಾಣವಾದ ಮೋತಕಪಲ್ಲಿಯ ಶ್ರೀ ಬಲಭೀಮಸೇನಾ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ದರ್ಶನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕರವೇ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ಶನಿವಾರ ಸಹಾಯಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದ ಅವರು, ಮೋತಕಪಲ್ಲಿಯ ಶ್ರೀ ಬಲಭೀಮಸೇನಾ ದೇವಾಸ್ಥಾನ ಅತ್ಯಂತ ಪುರಾತನ ದೇವಾಲಯಾಗಿದ್ದು, ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಸದರಿ ದೇವಸ್ಥಾನಕ್ಕೆ ಪ್ರತಿ ಶನಿವಾರ, ಅಮವಾಸ್ಯೆ, ಹುಣ್ಣಿಮೆ ಹಾಗೂ ವಿಶೇಷ ದಿನಗಳಂದು ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಅಲ್ಲದೇ ಈ ಭಾಗದಲ್ಲಿ ದೊಡ್ಡ ಪ್ರಮಾಣದ ಜಾತ್ರೆಯೂ ನಡೆಯುತ್ತದೆ. ಆದರೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ರೇವಗ್ಗಿ ಮತ್ತು ಘತ್ತರಗಾ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಿದಂತೆ ಮೋತಕಪಲ್ಲಿಯ ಶ್ರೀ ಬಲಭೀಮಸೇನಾ ದೇವಾಲಯವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ.

ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಪದಾಧಿಕಾರಿಗಳಾದ ಶ್ರೀನಿವಾಸರೆಡ್ಡಿ ಮದನಾ, ಮಹೇಶ ಪಾಟೀಲ್, ಚಂದ್ರಶೇಖರ ಪೂಜಾರಿ, ದಶರಥ ಚವ್ಹಾಣ, ದೇವು ನಾಟೀಕಾರ, ಗುಂಡಪ್ಪ ಪುಜಾರಿ, ಮಲ್ಲಿಕಾರ್ಜುನ ಕಾಲಕಲವಾರ, ಭೀಮಯ್ಯ ಗುತ್ತೇದಾರ, ರವಿಸಿಂಗ್ ಇಮಡಾಪೂರ, ಮಹೇಶರೆಡ್ಡಿ ಜಾಕನಹಳ್ಳಿ, ಚಂದ್ರಶೇಖರ ಮಡಿವಾಳ, ಭೀಮಾಶಂಕರ, ಚನ್ನಬಸಪ್ಪ, ಶ್ರೀನಾಥ, ಪವನ, ಕಿರಣ ಪಾಟೀಲ್, ಗುರುನಾಥ, ಅನೀಲ, ಚಂದ್ರು ಬೆನಕನಹಳ್ಳಿ, ರಮೇಶ ಸೇಡಂ, ಪ್ರಜ್ವಲ್, ನಾಗರಾಜ, ಅಮನ, ಸತೀಶ, ಮಲ್ಲಿಕಾರ್ಜುನ, ಸಾಬಣ್ಣ ಸೇರಿದಂತೆ ಇನ್ನಿತರರಿದ್ದರು.