ಕಲಬುರಗಿ: ನಗರದ ಪಂಚಶೀಲ ನಗರದ ಮನೆ ಎದುರು ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕದ್ದೊಯ್ದು ಸುಟ್ಟಿದ್ದಾರೆ ಎಂದು ವಾಹನ ಮಾಲಿಕ ಸಂಜುಕುಮಾರ ಕಾಂಬಳೆ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ. ಜು.೪ರಂದು ರಾತ್ರಿ ೧ಗಂಟೆಗೆ ಆಗಮಿಸಿದ ಅಭಿಷೇಕ ರಡ್ಡಿ, ಸಚಿನ, ದರ್ಶನ, ದರ್ಶನ ಹುಣಸಿಹಡಗಿಲ್, ವಿಶ್ವನಾಥ ಸೇರಿ ಪಂಚಶೀಲ ನಗರದ ಮನೆಯ ಎದುರು ಗೇಟ್‌ಗೆ ಕಲ್ಲು ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿ, ಮನೆಯಿಂದ ಹೊರ ಬಂದಾಗ ಬಟ್ಟೆ ಹರಿದಿದ್ದಾರೆ. ನಂತರ ಜು.೫ರಂದು ರಾತ್ರಿ ವಾಹನವನ್ನು ಕಳ್ಳತನ ಮಾಡಿ, ಹುಡುಕಾಡಿದಾಗ ಹನುಮಾನ ನಗರದಲ್ಲಿನ ಖಾಲಿ ಜಾಗದಲ್ಲಿ ಸುಟ್ಟು ಹಾಕಿರುತ್ತಾರೆ. ಜು.೪ರಂದು ರಾತ್ರಿ ಕಲ್ಲು ಹೊಡೆದವರೇ ವಾಹನ ಸುಟ್ಟಿದ್ದಾರೆ ಎಂದು ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.