ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಿಎಸ್‌ಐ ಎಸ್.ಪಿ.ಉನ್ನದ, ಬಾಳು ಹೊಸಮನಿ, ಶಿವಾನಂದ ಕುರಬೇಟ, ಅಜ್ಜಪ್ಪ ಪಾಣಿ, ಬಸವರಾಜ ಇತರರಿದ್ದರು. 
ಜಿಲ್ಲೆ

ಮೊಹರಂ ಹಬ್ಬ ಶಾಂತಿಯುತವಾಗಿ ಆಚರಿಸಿ

Belagavi

ಕಟಕೋಳ: ಮೊಹರಂ ಹಬ್ಬವನ್ನು ಹಿಂದು ಮುಸ್ಲಿಮರು ಸೇರಿ ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಿಸಿ ಎಂದು ಕಟಕೋಳ ಪಿಎಸ್‌ಐ ಎಸ್.ಪಿ.ಉನ್ನದ ಕರೆ ನೀಡಿದರು. ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ತಮ್ಮ ಹಬ್ಬಗಳನ್ನು ಅವರವರ ಸಂಪ್ರದಾಯದಂತೆ ಆಚರಣೆ ಮಾಡುತ್ತಾರೆ. ನಾವೆಲ್ಲರೂ ಎಲ್ಲ ಧರ್ಮಗಳ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡಬಾರದು. ಯಾರಾದರೂ ಕೋಮುಭಾವನೆ ಕೆರಳಿಸುವ ಕೆಲಸ ಮಾಡಿದರೆ ಅವರ ಮೇಲೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಬಾಳು ಹೊಸಮನಿ, ಶಿವಾನಂದ ಕುರಬೇಟ, ಅಜ್ಜಪ್ಪ ಪಾಣಿ, ಬಸವರಾಜ ಹಲಗತ್ತಿ, ಲಾಲಾಸಾಬ್ ನದಾಫ್, ರಸೂಲಸಾಬ್ ತರಕಾರ, ಬಸವರಾಜ ಕಲಕುಟ್ರಿ, ಮಹಾಲಿಂಗಪ್ಪ ಅಡಗಿಮನಿ, ಕಲ್ಲಪ್ಪ ಕೊರಕೊಪ್ಪ, ನಿಂಗಪ್ಪ ದಾನನ್ನವರ ಇತರರು ಇದ್ದರು.