ಇಳಕಲ್ಲ (ಗ್ರಾ) : ಮೊಹರಂ ಹಬ್ಬವನ್ನು ನಗರದಲ್ಲಿ ಶಾಂತಿ ರೀತಿಯಿಂದ ಆಚರಿಸಿ ಎಂದು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಆರ್. ನಾಯಕ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶಾಂತಿ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲಾಯಿ ದೇವರುಗಳ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಗದ್ದಲ ಮಾಡದೆ ಸಂಪ್ರದಾಯವನ್ನು ಬಿಡದೆ ಬೇಗ ದೇವರು ಹೊಳೆಗೆ ಹೋಗುವಂತೆ ಸಮಿತಿ ಸದಸ್ಯರು ನೋಡಿಕೊಳ್ಳಬೇಕು ಎಂದು ಹೇಳಿದರು.
ಮಹೇಶ ಪಾಟೀಲ, ಯಲ್ಲಪ್ಪ ಪೂಜಾರಿ, ಮಹಾಂತೇಶ ಚಲವಾದಿ ಮಾತನಾಡಿದರು. ಅಪರಾಧ ವಿಭಾಗದ ಪಿಎಸ್‌ಐ ಚಂದ್ರಶೇಖರ ಕಿರಶ್ಯಾಳ, ದುರ್ಗೇಶ ವಡ್ಡರ ಇದ್ದರು.