ಜಿಲ್ಲೆ

ಮೊಹಮ್ಮದ್ ಇಕ್ಬಾಲ್ ಉರ್ದು ಸಾಹಿತ್ಯದ ದೊಡ್ಡ ಆಸ್ತಿ

ಚಿತ್ರದುರ್ಗ: ಅಲ್ಲಮಇಕ್ಬಾಲ್ ಎಂದೇ ಪ್ರಸಿದ್ಧಿಯಾಗಿದ್ದ ಮೊಹಮ್ಮದ್‌ಇಕ್ಬಾಲ್ ಅವರು, ಉರ್ದು ಸಾಹಿತ್ಯದ ಬಹು ದೊಡ್ಡ ಆಸ್ತಿ ಎಂದು ಬಾಲಕರ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಪ್ರೊ.ಇಕ್ಬಾಲ್‌ಅಹಮ್ಮದ್ ಹೇಳಿದರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಉರ್ದು ವಿಭಾಗದಲ್ಲಿ ಬುಧವಾರ ಉರ್ದು ದಿನಾಚರಣೆಯಲ್ಲಿ ವಿಶೇಷ ಉಪ ನ್ಯಾಸ ನೀಡಿದ ಅವರು, ಮೊಹಮ್ಮದ್ ಇಕ್ಬಾಲ್ ಕವಿ, ರಾಜಕಾರಣಿ ಹಾಗೂ ತತ್ತ್ವಜ್ಞಾನಿ ಕೂಡ ಆಗಿದ್ದರು. ಇವರು ಪರ್ಸಿಯನ್‌ನಲ್ಲೂ ಲೇಖನಗಳನ್ನು ಬರೆದಿದ್ದಾರೆ. ದೇಶದಲ್ಲಿ ಇವರ ಕವನ ಸಾರೇ ಜಹಾನ್ ಸೇ ಅಚ್ಛಾ ಎಂಬ ಪ್ರಸಿದ್ಧ ಗೀತೆಯಾಗಿದೆ ಎಂದರು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಪರಮೇಶ್ವರ ಮಾತನಾಡಿ, ಅಮೀರ್ ಖುಸ್ರುವನ್ನು ಉರ್ದು ಭಾಷೆಯ ಪಿತಾಮಹ ಎಂದು ಕರೆಯುತ್ತಾರೆ. ಭಾರತ ಸರ್ವಧರ್ಮೀಯರ ನಾಡಾಗಿದೆ ಎಂದರು. ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ,ಉರ್ದು ವಿಭಾಗದ ಮುಖ್ಯಸ್ಥ ಮೊಹಮ್ಮದ್ ತಾಜ್‌ಪೀರ್ ಮಾತನಾಡಿದರು. ಫಿಜಾಬಾನು, ಶಾಹಿದಾ ಪರ್ವೀನ್, ಹಬೀಬ್ ಉನ್ನೀಸಾ ಪ್ರಾರ್ಥಿಸಿದರು. ನಾಜಿ ಯಾಬಾನು ನಿರೂಪಿಸಿದರು. ಉಜ್ಮಾ ಪರ್ವೀನ್ ಸ್ವಾಗತಿಸಿ, ಅಯೀಷಾ ಫಾತೀಮಾ ವಂದಿಸಿದರು.