ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದ ಕೆರೆಗೆ ತಾಪಂ ಇಒ ರಾಮು ಅಗ್ನಿ ಭೇಟಿ ನೀಡಿ ಮೊಸಳೆ ಇರುವ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದರು. ಹಣಮಂತರಾಯಗೌಡ ಬಿರಾದಾರ, ಎಸ್.ಸಿ.ನಾಯ್ಕೋಡಿ, ಮಲ್ಲು ಕೆಂಭಾವಿ, ಸಂಗನಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಮೊಸಳೆ ಇರುವ ಹೊನ್ನಳ್ಳಿ ಗ್ರಾಮದ ಕೆರೆಗೆ ತಾಪಂ ಇಒ ಭೇಟಿ

Vijayapura - Desk - Chinnayya Chinnayyanamath

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದ ಕೆರೆಗೆ ಶುಕ್ರವಾರ ಸಿಂದಗಿ ತಾಪಂ ಇಒ ರಾಮು ಅಗ್ನಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮೊಸಳೆ ಕುರಿತು ಮಾಹಿತಿ ಪಡೆದರು.

ಕೆರೆಯಲ್ಲಿರುವ ಮೊಸಳೆ ಸೆರೆ ಹಿಡಿಯಲು ಕೆರೆ ಸುತ್ತಲಿನ ಪ್ರದೇಶಕ್ಕೆ ಸಿಸಿ ಟಿವಿ, ಜಾಳಗಿ ಅಳವಡಿಸುವಂತೆ ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ನಾಯ್ಕೋಡಿ ಅವರಿಗೆ ಸೂಚಿಸಿದರು. ತಾಲೂಕು ಅರಣ್ಯಾಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಿ, ಮೊಸಳೆಗೆ ಬಲೆ ಹಾಕಿ ಸೆರೆ ಹಿಡಿಯುವಂತೆ ತಿಳಿಸಿದರು.

ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಹಣಮಂತರಾಯಗೌಡ ಬಿರಾದಾರ, ಸಾಹೇಪಟೇಲ ಮುರಡಿ, ದೇವೀಂದ್ರ ತೊನಶ್ಯಾಳ, ಸಂಗನಗೌಡ ಪಾಟೀಲ, ಭೀಮನಗೌಡ ಹೆಬ್ಬಾಳ, ಮಲ್ಲು ಕೆಂಭಾವಿ, ಹಣಮಂತ ಯಂಟಮಾನ, ಇಸ್ಮಾಯಿಲ್ ತಂಗಡಗಿ, ಮಲ್ಲು ಭಜಂತ್ರಿ, ಉಷೇನ ಯಂಕಂಚಿ, ಬಸನಗೌಡ ಪಾಟೀಲ, ದಿನೇಶ ಕಡಕೋಳ, ಅಂಬ್ರಿಶ ಪಾಟೀಲ, ಸುರೇಶ ತಳವಾರ ಇತರರಿದ್ದರು.